ನವದೆಹಲಿ (ಪಿಟಿಐ): ನೇರ ನಗದು ವರ್ಗಾವಣೆ ಯೋಜನೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್ ಆಫ್ ಎಲ್ಪಿಜಿ– ಡಿಬಿಟಿಎಲ್) ಅಡಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗೆ ನೀಡುವ ಸಬ್ಸಿಡಿ ಮೊತ್ತ ವರ್ಗಾಯಿಸಲು ಆಧಾರ್ ಸಂಖ್ಯೆ ಕಡ್ಡಾಯವಲ್ಲ. ಬ್ಯಾಂಕ್ ಖಾತೆಯ ವಿವರ ನೀಡಿದರೆ ಸಾಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
‘ಡಿಬಿಟಿಎಲ್’ ಯೋಜನೆ ಅಡಿ ಎಲ್ಲ ಎಲ್ಪಿಜಿ ಬಳಕೆದಾರರು ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳನ್ನು (ಸಬ್ಸಿಡಿಸಹಿತ ಹಾಗೂ ಸಬ್ಸಿಡಿರಹಿತ) ಮಾರುಕಟ್ಟೆ ದರದಂತೆ ಖರೀದಿಸಬೇಕಾಗುತ್ತದೆ. ಅವರಿಗೆ ನೀಡಬೇಕಾದ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಗೆ ಸೋಮವಾರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.