ADVERTISEMENT

ಎಸ್‌ಪಿಗೆ ₹ 10,000 ದಂಡ

​ಪ್ರಜಾವಾಣಿ ವಾರ್ತೆ
Published 26 ಮೇ 2017, 20:16 IST
Last Updated 26 ಮೇ 2017, 20:16 IST

ಬೆಂಗಳೂರು: ಸಬ್‌ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಉತ್ತರ ಪತ್ರಿಕೆಯ ದೃಢೀಕೃತ ಪ್ರತಿ ನೀಡಲು ನಿರಾಕರಿಸಿದ ನೇಮಕಾತಿ ಮತ್ತು ತರಬೇತಿ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ಎ.ಜಿ. ಈಶ್ವರಪ್ಪ ಅವರಿಗೆ ಮಾಹಿತಿ ಆಯೋಗದ  ಆಯುಕ್ತ ಎನ್‌.ಪಿ. ರಮೇಶ್‌  ₹ 10,000 ದಂಡ ವಿಧಿಸಿದ್ದಾರೆ.

‘ದಂಡದ ಮೊತ್ತವನ್ನು ಈಶ್ವರಪ್ಪ ಅವರ ಮೇ ತಿಂಗಳ ವೇತನದಲ್ಲಿ  ವಸೂಲು ಮಾಡಿ ಆಯೋಗದ ಖಾತೆಗೆ ಪಾವತಿಸಿ’ ಎಂದು  ಡ್ಯೆಪ್ಯೂಟಿ ಇನ್‌ಸ್ಪೆಕ್ಟರ್‌ ಜನರಲ್ (ಡಿಐಜಿ) ಅವರಿಗೆ ಆಯೋಗ ನಿರ್ದೇಶನ ನೀಡಿದೆ.

2014ರಲ್ಲಿ 152 ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಲಿಖಿತ ಪರೀಕ್ಷೆ ಬರೆದಿದ್ದ ತುಮಕೂರಿನ ಎನ್‌. ರಾಘವೇಂದ್ರ ಎಂಬುವರು ಉತ್ತರ ಪತ್ರಿಕೆಯ ಪ್ರತಿ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ 2015ರ ನವೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.