ಬೆಂಗಳೂರು: ಆನ್ಲೈನ್ನಲ್ಲಿ ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐ.ಟಿ ರಿಟರ್ನ್ಸ್) ಸಲ್ಲಿಸಲು ಕಡ್ಡಾಯವಾಗಿ ಆಧಾರ್ ಹೊಂದಿರಬೇಕೆಂಬ ನಿಬಂಧನೆ ಸದ್ಯದಲ್ಲೇ ದೂರವಾಗಲಿದೆ.
ರಿಟರ್ನ್ಸ್ ಸಲ್ಲಿಸಲು ಈ ತಿಂಗಳ 31 ಕೊನೆಯ ದಿನವಾಗಿರುವುದರಿಂದ ಆಧಾರ್ ಹೊಂದಿರದ ತೆರಿಗೆದಾರರಲ್ಲಿ ಮೂಡಿರುವ ಗೊಂದಲವನ್ನು ನೇರ ತೆರಿಗೆ ಕೇಂದ್ರೀಯ ಮಂಡಳಿಯು ಸುತ್ತೋಲೆ ಹೊರಡಿಸಿ ದೂರ ಮಾಡಲಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.