ADVERTISEMENT

ಕಬ್ಬಿಣ ಅದಿರು ಹೊರತೆಗೆಯಲು ಮೈಸೂರು ಮಿನರಲ್ಸ್‌ಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:50 IST
Last Updated 1 ಸೆಪ್ಟೆಂಬರ್ 2014, 19:50 IST

ನವದೆಹಲಿ: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ಲಿ. (ಎಂಎಂಎಲ್‌) ಕಂಪೆನಿಗೆ 40 ಲಕ್ಷ ಟನ್‌ ಕಬ್ಬಿಣ ಅದಿರು ಹೊರತೆಗೆಯಲು ಸುಪ್ರೀಂಕೋರ್ಟ್‌ ಹಸಿರು ಪೀಠವು ಸೋಮವಾರ ಅನುಮತಿ ನೀಡಿತು.

ಮೈಸೂರು ಮಿನರಲ್ಸ್‌ ಕಂಪೆನಿ ಸದ್ಯ ಹತ್ತು ಲಕ್ಷ ಟನ್‌ ಅದಿರು ಉತ್ಪಾ ದಿಸುತ್ತಿದೆ. ಉಕ್ಕು ಉದ್ಯಮಗಳ ಬೇಡಿಕೆ ಯನ್ನು ಪೂರೈಸಲು ಕೇಂದ್ರ ಸರ್ಕಾರಿ ಸ್ವಾಮ್ಯದ ನ್ಯಾಷನಲ್‌ ಮಿನರಲ್‌ ಡೆವಲಪ್‌ಮೆಂಟ್‌ ಕಾರ್ಪೊ ರೇಷನ್‌ (ಎನ್‌ಎಂಡಿಸಿ)ಗೆ ಅಸಾಧ್ಯವಾಗಿರುವು ದರಿಂದ ಎಂಎಂಎಲ್‌ ಮಿತಿ ಯನ್ನು ಸುಪ್ರೀಂ ಕೋರ್ಟ್‌ ಹೆಚ್ಚಿಸಿದೆ.

ನ್ಯಾ. ಜೆ.ಎಸ್‌. ಖೇಹರ್‌, ನ್ಯಾ. ಚಲಮೇಶ್ವರ್‌ ಹಾಗೂ ನ್ಯಾ. ದೀಪಕ್‌ ಮಿಶ್ರ ಅವರನ್ನೊಳಗೊಂಡ ಹಸಿರು ಪೀಠವು ಎಂಎಂಎಲ್‌ ಅದಿರು ಉತ್ಪಾ ದನಾ ಮಿತಿ ಹೆಚ್ಚಿಸಿತು. ಉಕ್ಕು ಉದ್ಯಮದ ಬೇಡಿಕೆಯನ್ನು ಗಮನ ದಲ್ಲಿಟ್ಟುಕೊಂಡು ಅದಿರು ಉತ್ಪಾದನೆ ಹೆಚ್ಚಿಸಬೇಕೆಂದು ಉಕ್ಕು ಉದ್ಯಮಗಳೂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದವು.

ಸುಪ್ರೀಂ ಕೋರ್ಟ್‌ 1.2ಕೋಟಿ ಟನ್‌ ಅದಿರು ಉತ್ಪಾದಿಸಲು ಎನ್‌ಎಂಡಿಸಿಗೆ ಅನುಮತಿ ನೀಡಿತ್ತು. ಆದರೆ, ಇದುವರೆಗೆ 90 ಲಕ್ಷ ಟನ್‌ ಅದಿರು ಮಾತ್ರ ಉತ್ಪಾದನೆ ಮಾಡಲು ಅದಕ್ಕೆ ಸಾಧ್ಯವಾಗಿದೆ. ಯಂತ್ರೋಪಕರಣ ಹಾಗೂ ಮೂಲ ಸೌಲಭ್ಯದ ಸಮಸ್ಯೆ ಯಿಂದಾಗಿ ನಿಗದಿತ ಪ್ರಮಾಣದಲ್ಲಿ ಅದಿರು ತೆಗೆಯಲು ಸಾಧ್ಯವಾಗದೆ ಇರುವುದರಿಂದ ರಾಜ್ಯ ಸರ್ಕಾರಿ ಸ್ವಾಮ್ಯದ ಎಂಎಂಎಲ್‌ ಮಿತಿಯನ್ನು ನ್ಯಾಯಪೀಠ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.