ADVERTISEMENT

ಕರ್ನಾಟಕದ ಬೇಜವಾಡಾ ವಿಲ್ಸನ್ ಮತ್ತು ಸಂಗೀತಗಾರ ಟಿಎಂ ಕೃಷ್ಣ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 8:36 IST
Last Updated 27 ಜುಲೈ 2016, 8:36 IST
ಬೇಜವಾಡಾ ವಿಲ್ಸನ್ - ಟಿಎಂ ಕೃಷ್ಣ
ಬೇಜವಾಡಾ ವಿಲ್ಸನ್ - ಟಿಎಂ ಕೃಷ್ಣ   

ನವದೆಹಲಿ: ಕರ್ನಾಟಕ ಮೂಲದ ಸಾಮಾಜಿಕ ಕಾರ್ಯಕರ್ತ ಬೇಜವಾಡಾ ವಿಲ್ಸನ್ ಮತ್ತು ಚೆನ್ನೈ ಮೂಲದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿಎಂ ಕೃಷ್ಣ ಅವರು 2016ರ ಸಾಲಿನ ಪ್ರತಿಷ್ಠಿತ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

'ಮಾನವೀಯ ಘನತೆಯ ಪರಭಾರೆ ಮಾಡಲಾಗದ ಹಕ್ಕು' ಸ್ಥಾಪಿಸಲು ಶ್ರಮಿಸಿರುವುದಕ್ಕಾಗಿ ಬೇಜ್ವಾಡ್ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ವೇಳೆ ಸಂಸ್ಕೃತಿಯಲ್ಲಿ ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಾತರಿ ಪಡಿಸಿದ್ದಕ್ಕಾಗಿ ಸಂಗೀತ ವಿದ್ವಾಂಸ ಕೃಷ್ಣ ಅವರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ.

ಈ ಇಬ್ಬರು ಭಾರತೀಯರ ಜತೆಗೆ  ಫಿಲಿಫೈನ್ಸ್ ನ ಕೊಂಚಿತಾ ಕಾರ್ಪಿಯೋ ಮೊರಾಲೆಸ್ , ಇಂಡೋನೇಷ್ಯಾದ ಡೋಂಪೆಟ್ ಧುವಾಫಾ, ವೈಂಟಿಯೇನ್ ರೆಸ್ಕ್ಯೂ ಹಾಗೂ ಜಪಾನ್ ಓವರ್ ಸೀಸ್ ಕೋಆಪರೇಷನ್ ಸ್ವಯಂ ಸೇವಾ ತಂಡ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.