ADVERTISEMENT

ಕಲಬೆರೆಕೆ ತಡೆ ಕಾನೂನು ಮಾರ್ಪಾಡಿಗೆ ಕಾರ್ಯಪಡೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2014, 19:30 IST
Last Updated 15 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಆಹಾರ ಮತ್ತು ಹಾಲು ಕಲಬೆರೆಕೆ ಹಾವ­ಳಿಗೆ ಕಡಿವಾಣ ಹಾಕಲು ಈಗಿರುವ ಆಹಾರ ಗುಣಮಟ್ಟ ಹಾಗೂ ಸುರಕ್ಷತೆ ಕಾನೂ­ನನ್ನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರ ಮುಂದಾಗಿದೆ.

ಆಹಾರ ಗುಣಮಟ್ಟ ಹಾಗೂ ಸುರಕ್ಷತಾ ಕಾನೂನನ್ನು ಸಮಗ್ರವಾಗಿ ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಿ 45 ದಿನಗಳಲ್ಲಿ ವರದಿ ನೀಡುವಂತೆ  ಸೂಚಿಸಲಾ­ಗಿದೆ ಎಂದು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಸೋಮವಾರ ಲೋಕಸಭೆಗೆ ತಿಳಿಸಿದರು.

ಅನಿಯಂತ್ರಿತ ಕೀಟನಾಶಕ ಹಾಗೂ ರೋಗನಿರೋಧಕಗಳ ಬಳಕೆಯಿಂದ ಆಹಾರ, ಮಾಂಸ ಮತ್ತು ಹಾಲಿನಲ್ಲಿ ಹೆಚ್ಚಾಗುತ್ತಿರುವ ವಿಷಯುಕ್ತ ಪದಾರ್ಥಗಳು ಜೀವಕ್ಕೆ ಮಾರಕವಾಗಿ ಪರಿಣಮಿಸಿವೆ ಎಂದು ನಡ್ಡಾ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.