ADVERTISEMENT

ಕಲಾಪಕ್ಕೆ ಒಂದು ಕುಟುಂಬ ಅಡ್ಡಿ: ಮೋದಿ ಆರೋಪ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST
ಕಲಾಪಕ್ಕೆ ಒಂದು  ಕುಟುಂಬ ಅಡ್ಡಿ: ಮೋದಿ ಆರೋಪ
ಕಲಾಪಕ್ಕೆ ಒಂದು ಕುಟುಂಬ ಅಡ್ಡಿ: ಮೋದಿ ಆರೋಪ   

ದಿಬ್ರುಗಡ/ ಮೊರನ್‌ (ಅಸ್ಸಾಂ) (ಪಿಟಿಐ): ಭಾರಿ ಗಾತ್ರದ ನಗಾರಿ ಬಾರಿಸುವ ಮೂಲಕ ಅಸ್ಸಾಂ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ‘ಒಂದು ಕುಟುಂಬ’ 2014ರ ಲೋಕಸಭೆ ಚುನಾವಣೆ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಇದರಿಂದಾಗಿ ಬಡಜನರಿಗೆ ಪ್ರಯೋಜನಕಾರಿಯಾಗಬೇಕಿದ್ದ ಹಲವು ಮಸೂದೆಗಳು ಅಂಗೀಕಾರವಾಗದೆ ಉಳಿದಿವೆ ಎಂದು ಪ್ರಧಾನಿ ಆರೋಪಿಸಿದರು.

ಅಸ್ಸಾಂನ ಚಹಾ ತೋಟದ ಕಾರ್ಮಿಕರನ್ನು ಉದ್ದೇಶಿಸಿ ಅವರು  ಮಾತನಾಡಿದರು. ‘ಒಂದು ಕುಟುಂಬ ಮಾತ್ರ ನಕಾರಾತ್ಮಕ ರಾಜಕಾರಣದಲ್ಲಿ ತೊಡಗಿದೆ. ಕಾಂಗ್ರೆಸ್‌ ಹೊರತುಪಡಿಸಿ ಇತರ ವಿರೋಧ ಪಕ್ಷಗಳ ಮುಖಂಡರು ನಮ್ಮನ್ನು ವಿರೋಧಿಸಿದರೂ ಸಂಸತ್ತು ಕಾರ್ಯ ನಿರ್ವಹಿಸಬೇಕು ಎಂದು ಬಯಸುತ್ತಾರೆ’ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.