ADVERTISEMENT

ಕಾಂಗ್ರೆಸ್‌–ಬಿಜೆಪಿ ಕೆಸರೆರಚಾಟ

ಸುಜಾತಾ ಸಿಂಗ್‌ ಹಠಾತ್‌ ಬದಲಾವಣೆಗೆ ರಾಜಕೀಯ ಬಣ್ಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ನವದೆಹಲಿ (ಪಿಟಿಐ): ವಿದೇಶಾಂಗ ಕಾರ್ಯ­ದರ್ಶಿ ಸುಜಾತಾ ಸಿಂಗ್‌ ಹಠಾತ್‌ ಬದಲಾವಣೆ ರಾಜ­ಕೀಯ ಬಣ್ಣ ಬಳಿದು­ಕೊಂ­ಡಿದ್ದು, ಈ ವಿವಾದ ಕಾಂಗ್ರೆಸ್‌ ಮತ್ತು  ಬಿಜೆಪಿ ನಡುವೆ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಿದೆ.

ಇನ್ನೂ ಎಂಟು ತಿಂಗಳು ಅಧಿಕಾರ  ಅವಧಿ ಇರುವಾಗಲೇ ಸುಜಾತಾ ಸಿಂಗ್‌ ಅವ­ರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಿದ ನಿರ್ಧಾರದ ಹಿಂದಿರುವ ಉದ್ದೇಶ­ ಸ್ಪಷ್ಟಪಡಿಸು­ವಂತೆ  ಕಾಂಗ್ರೆಸ್‌ ಕೇಳಿದೆ.

ಹಿರಿಯ ಮಹಿಳಾ ಅಧಿಕಾರಿ­ಯೊಬ್ಬ­ರನ್ನು ಕಾರಣವಿಲ್ಲದೆ ಹಠಾತ್‌ ಬದ­ಲಾ­ವಣೆ ಮಾಡಿರುವ ಸರ್ಕಾರದ  ಕ್ರಮ ಹಲ­ವಾರು ಶಂಕೆಗಳಿಗೆ ಕಾರಣವಾಗಿದೆ. ಕೇಂದ್ರ ಈ ಕುರಿತು ಜನ­ತೆಗೆ ವಿವರಣೆ ನೀಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಸರ್ಕಾರದ ಈ ನಿರ್ಧಾರದ ಹಿಂದೆ   ರಾಜ­ಕೀಯದ ವಾಸನೆ ಕಂಡು­­ಬರು­ತ್ತಿದೆ. ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಡಿಆರ್‌­ಡಿಒ,

ದೊಡ್ಡ ಜವಾಬ್ದಾರಿ, ಉನ್ನತ ಗೌರವ ನಾನೇ ಬಿಡುಗಡೆ ಕೋರಿದ್ದೆ
ವಿದೇಶಾಂಗ ಕಾರ್ಯದರ್ಶಿ ಹುದ್ದೆ ನಿಜಕ್ಕೂ ದೊಡ್ಡ ಜವಾಬ್ದಾರಿ ಹಾಗೂ ನನಗೆ ದೊರೆತ ಉನ್ನತ ಗೌರವ. ಸರ್ಕಾ­ರದ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುವುದು ನನ್ನ ಧರ್ಮ
  – ಎಸ್‌. ಜೈಶಂಕರ್‌, ಹೊಸ ವಿದೇಶಾಂಗ ಕಾರ್ಯದರ್ಶಿ
‘ಸತತ 38 ವರ್ಷಗಳ ಸರ್ಕಾರಿ ಸೇವೆ­ಯಲ್ಲಿ ದಣಿದು, ರಾಜೀನಾಮೆಗೆ ನಿರ್ಧ­ರಿಸಿದ್ದೆ. ಹೀಗಾಗಿ ಅವ­ಧಿಗೂ ಮುನ್ನವೇ ಸೇವೆ­ಯಿಂದ ಬಿಡು­ಗಡೆ ಮಾಡುವಂತೆ  ಕೋರಿ ನಾನೇ ಪತ್ರ ಬರೆ­ದಿದ್ದೆ’
– ಸುಜಾತಾ ಸಿಂಗ್‌

ಎಸ್‌ಪಿಜಿ ಹಾಗೂ ಐಐಎಂ ಮುಖ್ಯಸ್ಥ­ರನ್ನು ಒಬ್ಬರ  ನಂತರ ಒಬ್ಬರಂತೆ  ಕಾರಣವಿಲ್ಲದೇ ಬದ­ಲಾ­ವಣೆ ಮಾಡಿದೆ.

ಈಗ  ಮಹಿಳಾ ವಿದೇ­ಶಾಂಗ ಕಾರ್ಯದ­ರ್ಶಿಯ ಸರದಿ.  ಅಧಿಕಾರಿಗಳನ್ನು ವಿನಾಕಾರಣ ಬದಲಾ­ವಣೆ ಮಾಡುವ ಮೂಲಕ ಸರ್ಕಾರ ಏನು ಸಾಧಿಸಲು ಹೊರಟಿದೆ ಎಂದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್‌ ಕುಟುಕಿದೆ.

ಸಮರ್ಥನೆ: ಸುಜಾತಾ ಸಿಂಗ್‌ ಎತ್ತಂಗಡಿ­ಯನ್ನು ಸಮರ್ಥಿಸಿ­ಕೊಂಡಿ­ರುವ ಬಿಜೆಪಿ, ಕೇಂದ್ರ ಸರ್ಕಾರದ ನಿರ್ಧಾ­­ರದ ಹಿಂದೆ  ಯಾವ ರಾಜ­ಕೀಯ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿ­ಯಲ್ಲಿ ವಿವೇ-ಚನೆ-ಯಿಂದಲೇ ಈ ತೀರ್ಮಾನ ಕೈಗೊಂಡಿದೆ. ಈ ಹಿಂದೆ ಅಧಿಕಾರ-ದಲ್ಲಿದ್ದ ಕಾಂಗ್ರೆಸ್‌ ಕೂಡ ಇಂತಹ ಹಲವಾರು ಬದಲಾವಣೆಯ ನಿರ್ಧಾರ ಕೈಗೊಂಡ ನಿದರ್ಶನಗಳಿವೆ ಎಂದು ಬಿಜೆಪಿ ವಕ್ತಾರ ನಳಿನ್‌ ಕೊಹ್ಲಿ ತಿರುಗೇಟು ನೀಡಿದ್ದಾರೆ.

‘ಖಡಕ್ ಅಧಿಕಾರಿಗೆ ಕೊಡುಗೆ’
ಅಮೆರಿಕದಲ್ಲಿ ರಾಜತಾಂತ್ರಿಕ ಅಧಿ­ಕಾರಿ­­ಯಾಗಿದ್ದ ಐಎಫ್‌-ಎಸ್‌ ಅಧಿಕಾರಿ ದೇವಯಾನಿ ಖೋಬ್ರಾಗಡೆ ಪ್ರಕರಣ­ದಲ್ಲಿ ಸುಜಾತಾ ಸಿಂಗ್‌ ತಾಳಿದ ಖಡಕ್‌ ನಿಲುವಿಗೆ ಕೇಂದ್ರ ಸರ್ಕಾರ ಈ ಕೊಡುಗೆ ನೀಡಿದೆ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.
 

ADVERTISEMENT
ವ್ಯಕ್ತಿಗಿಂತ ಸಂಸ್ಥೆ ಮುಖ್ಯ
‘ಸಮರ್ಪಕ­ವಾಗಿ ಹುದ್ದೆ ನಿರ್ವ­ಹಿ­­ಸಿದ ತೃಪ್ತಿ ನನಗಿದೆ. ಒಬ್ಬ ವ್ಯಕ್ತಿ ಒಂದು ಸಂಸ್ಥೆ ಅಥವಾ ವ್ಯವ­ಸ್ಥೆ­ ಬೆಳೆಸ­ಬಹುದು. ಹಾಗೆಂದ ಮಾತ್ರಕ್ಕೆ ಆ ವ್ಯಕ್ತಿ ಎಂದಿಗೂ ಸಂಸ್ಥೆ­ಗಿಂತ ದೊಡ್ಡವ­ನಾಗ­ಲಾರ. ಸಂಸ್ಥೆ ಮುಖ್ಯವೇ ಹೊರತು ವ್ಯಕ್ತಿ ಅಲ್ಲ’ ಎಂದು ಅವರು ಹೇಳಿ­ಕೊಂಡಿದ್ದಾರೆ.
2013ರಲ್ಲಿ ಮೂರನೇ ಮಹಿಳಾ ವಿದೇಶಾಂಗ ಕಾರ್ಯ-ದರ್ಶಿ-ಯಾಗಿ ಅಧಿ­ಕಾರ ಸ್ವೀಕರಿಸಿದ್ದ ಸುಜಾತಾ ಸಿಂಗ್‌ ಅಧಿ­ಕಾರ ಅವಧಿ ಇನ್ನೂ ಎಂಟು ತಿಂಗಳು ಇರುವಾಗಲೇ  ಕೇಂದ್ರ ಸರ್ಕಾ­ರ ಅವರನ್ನು ಬದಲಾವಣೆ ಮಾಡಿರು­ವುದು  ಅವರಿಗೆ ತೀವ್ರ ಅಸ­ಮಾ­ಧಾನ ತಂದಿದೆ ಎನ್ನಲಾಗಿದೆ. ಇದರಿಂದಾಗಿ ಅಧಿ-ಕಾರ ಹಸ್ತಾಂತರ ಸಂದ­ರ್ಭ­­ದಲ್ಲಿ ಅವರು ಗೈರು ಹಾಜರಾ­ಗಿದ್ದರು.

ಇನ್ನೂ ಎಂಟು ತಿಂಗಳು ಅಧಿಕಾ­ರಾವಧಿ ಇರುವಾಗಲೇ ತರಾ-ತುರಿ-ಯಲ್ಲಿ ವಿದೇಶಾಂಗ ಕಾರ್ಯದರ್ಶಿ ಹುದ್ದೆ­ಯಿಂದ ಸುಜಾತಾ ಸಿಂಗ್‌ ಅವರನ್ನು ಎತ್ತಂಗಡಿ ಮಾಡಿರುವುದರ ಹಿಂದಿನ ಉದ್ದೇಶ  ಸ್ಪಷ್ಟಪಡಿಸುವಂತೆ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಸವಾಲು ಹಾಕಿದ್ದಾರೆ. 

ಸುಜಾತಾ ಸಿಂಗ್‌ ಎತ್ತಂಗಡಿ ಏಕೆ?
ವಿದೇಶಾಂಗ ವ್ಯವಹಾರಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವಧಿಗೂ ಮುನ್ನವೇ ಸುಜಾತಾ ಸಿಂಗ್‌ ಅವರನ್ನು ಬದಲಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಬೆಳವಣಿಗೆಯಿಂದ ಸುಜಾತಾ ಸಂಪೂರ್ಣ ಹತಾಶರಾಗಿದ್ದಾರೆ ಎಂದೂ ಮೂಲಗಳು ತಿಳಿಸಿವೆ.  

ಜೈಶಂಕರ್‌ ಅಧಿಕಾರ ಸ್ವೀಕಾರ
ಅಮೆರಿಕದಲ್ಲಿ ಭಾರತದ ರಾಯ­ಭಾರಿ­­ಯಾಗಿದ್ದ ಹಿರಿಯ ಐಎಫ್‌ಎಸ್‌ ಅಧಿ­ಕಾರಿ ಎಸ್‌. ಜೈಶಂಕರ್‌ ಗುರುವಾರ ಹೊಸ ವಿದೇ­ಶಾಂಗ ಕಾರ್ಯದರ್ಶಿ­ಯಾಗಿ ಅಧಿ­ಕಾರ ಸ್ವೀಕರಿಸಿದರು.

ಅಸಮರ್ಥ ಕಾರ್ಯನಿರ್ವಹಣೆ ಮತ್ತು ಅತಿಯಾದ ಪ್ರಚಾರ ಪ್ರಿಯತೆ ಅವರ ಹುದ್ದೆಯನ್ನು ಬಲಿಪಡೆಯಿತು. ಸುಜಾತಾ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಕೇಂದ್ರ ಸರ್ಕಾರ, ರಾಜೀನಾಮೆ ನೀಡಿ ನಿರ್ಗಮಿಸುವಂತೆ ಹಲವಾರು ಬಾರಿ ಪರೋಕ್ಷವಾಗಿ ಸೂಚನೆ ನೀಡುತ್ತಲೇ ಬಂದಿತ್ತು. ಆದರೆ, ಸರ್ಕಾರದ ಇಂಗಿತ­ವನ್ನು ಗಂಭೀರವಾಗಿ ತೆಗೆದು­ಕೊಳ್ಳದ ಸುಜಾತಾ ಸಿಂಗ್ ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ.

ಸುಷ್ಮಾ ಸ್ಪಷ್ಟನೆ: ‘ಜೈಶಂಕರ್‌ ಅವರನ್ನು ನೂತನ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ಮಾಡುವ ಸರ್ಕಾರದ ನಿರ್ಧಾರವನ್ನು ಸುಜಾತಾ ಸಿಂಗ್‌ ಅವರಿಗೆ ಖುದ್ದಾಗಿ ತಿಳಿಸಿದ್ದೆ’ ಎಂದು ವಿದೇಶಾಂಗ ವ್ಯವಹಾ­ರಗಳ  ಸಚಿವೆ ಸುಷ್ಮಾ ಸ್ವರಾಜ್‌ ಸ್ಪಷ್ಟಪಡಿಸಿದ್ದಾರೆ.

ಈ ವಿಚಾರ ಸ್ವತಃ ಸುಜಾತಾ ಅವರಿಗೆ ಗೊತ್ತಿರಲಿಲ್ಲ ಎನ್ನುವ ವರದಿಗಳ ಬೆನ್ನಲ್ಲಿಯೇ ಸುಷ್ಮಾ ಈ ರೀತಿ ಟ್ವೀಟ್‌ ಮಾಡಿದ್ದಾರೆ.

ಜೈಶಂಕರ್‌ ಅವರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಸರ್ಕಾರ ತೆಗೆದುಕೊಂಡ ದಿಢೀರ್‌ ನಿರ್ಧಾರವನ್ನು ಸಮರ್ಥಿಸಿಕೊಂಡ ಸುಷ್ಮಾ, ‘ ಜೈಶಂಕರ್‌ ಜ.೩೧ರಂದು ನಿವೃತ್ತಿಯಾಗಲಿದ್ದರು. ಅದಕ್ಕೂ ಮೊದಲೇ ನಾವು ಅವರ ನೇಮಕಾತಿ ಆದೇಶ ಹೊರಡಿಸ­ಬೇಕಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.