ADVERTISEMENT

ಕಾಂಡೋಮ್, ಸ್ಯಾನಿಟರಿ ನ್ಯಾಪ್ಕಿನ್‌ ಮಾರಾಟ

ಹೊಸ ಶೌಚಾಲಯ ನೀತಿ: ರೈಲ್ವೆ ಮಂಡಳಿ ವಿನೂತನ ಕ್ರಮ

ಪಿಟಿಐ
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ರೈಲು ನಿಲ್ದಾಣದ ಒಳಗಿನ ಹಾಗೂ ನಿಲ್ದಾಣದ ಹೊರಗಿನ ಶೌಚಾಲಯಗಳಲ್ಲಿ ಕಡಿಮೆ ದರದಲ್ಲಿ ಕಾಂಡೋಮ್‌ ಹಾಗೂ ನ್ಯಾನಿಟರಿ ನ್ಯಾಪ್‌ಕಿನ್‌ ಮಾರಾಟ ಅವಕಾಶ ಕಲ್ಪಿಸುವ ಹೊಸ ನೀತಿಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಪ್ರಯಾಣಿಕರಲ್ಲದೇ ನಿಲ್ದಾಣದ ಸಮೀಪದ ಪ್ರದೇಶಗಳಲ್ಲಿ ವಾಸಿಸುವ ಜನರು ಸಹ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮಂಡಳಿ ತಿಳಿಸಿದೆ.

‘ರೈಲು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡುವ ಸಂಬಂಧ ನಿಲ್ದಾಣಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ನಿರ್ಮಿಸಲಾಗಿರುವ ಶೌಚಾಲಯ
ಗಳನ್ನು ಅರಿವು ಮೂಡಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಋತುಚಕ್ರ ಸಂದರ್ಭದಲ್ಲಿ ಆರೋಗ್ಯಕರ ಕ್ರಮ ಕೈಗೊಳ್ಳವುದು ಹಾಗೂ ಗರ್ಭನಿರೋಧಕಗಳ ಬಳಕೆ ಬಗ್ಗೆ ತಿಳಿವಳಿಕೆ ನೀಡಲು ಉದ್ದೇಶಿಸಲಾಗಿದೆ’ ಎಂದು ಮಂಡಳಿ ತಿಳಿಸಿದೆ.

ADVERTISEMENT

‘ಚಿಕ್ಕ ಕಿಯೊಸ್ಕ್‌ ಮೂಲಕ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಬಳಸಿದ ನ್ಯಾಪ್ಕಿನ್‌ಗಳ ವಿಲೇವಾರಿಗೆ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಪುರುಷರಿಗಾಗಿ ಕಾಂಡೋಮ್ ಮಾರಾಟ ವ್ಯವಸ್ಥೆಯೂ ಇರುತ್ತದೆ’ ಎಂದೂ ತಿಳಿಸಿದೆ.

ಅಂಗವಿಕಲರಿಗೂ ಸಹ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇರಲಿದ್ದು, ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯ ಕಮೋಡ್‌ಗಳನ್ನು ಅಳವಡಿಸಲಾಗುತ್ತದೆ.

ದೇಶದಲ್ಲಿರುವ 8,500 ರೈಲು ನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದ್ದು, ಈ ಯೋಜನೆಗೆ ತಗಲುವ ವೆಚ್ಚವನ್ನು ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್‌ಆರ್‌) ಭರಿಸಲಾಗುತ್ತದೆ. ಜಾಹೀರಾತು ಹಾಗೂ ಸಿಎಸ್‌ಆರ್ ನೆರವಿನಿಂದ ಇವುಗಳ ನಿರ್ವಹಣೆ ಮಾಡಲಾಗುತ್ತದೆ ಎಂದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.