ADVERTISEMENT

ಕಾಗದ ಬದಲು ಪ್ಲಾಸ್ಟಿಕ್ ನೋಟು: ಜೇಟ್ಲಿ ಇಂಗಿತ

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 10:31 IST
Last Updated 2 ಜೂನ್ 2015, 10:31 IST

ನವದೆಹಲಿ(ಪಿಟಿಐ): ಪ್ಲಾಸ್ಟಿಕ್ ನೋಟುಗಳ ಚಲಾವಣೆ ಜನಪ್ರಿಯವಾದಂತೆ ನೋಟು ಮುದ್ರಣಕ್ಕೆ ಬೇಕಿರುವ ಕಾಗದದ ಆಮದು ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

‘ಭಾರತದಲ್ಲಿ ತಯಾರಿಸಿ’ ಅಭಿಯಾನದ ಅಂಗವಾಗಿ ಮಂಗಳವಾರ ನಡೆದ ಸಮಾವೇಶದಲ್ಲಿ ಅವರು ದೇಶದಲ್ಲಿಯೇ ನೋಟು ಮುದ್ರಣಕ್ಕೆ ಬೇಕಿರುವ ಕಾಗದ ತಯಾರಿಕೆ ಕುರಿತು ಮಾತನಾಡಿದರು.

ಹೋಶಂಗಾಬಾದ್ ಮತ್ತು ಮೈಸೂರಿನಲ್ಲಿ ನೋಟುಗಳ ಮುದ್ರಣಕ್ಕೆ ಬಳಸುವ ಕಾಗದ ತಯಾರಿಕಾ ಘಟಕ ಪ್ರಾರಂಭವಾಗುತ್ತಿದೆ. ಇದರ ಜತೆಗೆ, ಪ್ಲಾಸ್ಟಿಕ್ ನೋಟು ಮತ್ತು ಕ್ರೆಡಿಟ್, ಡೆಬಿಟ್ ಕಾರ್ಡ್ ಗಳ ಬಳಕೆಯಿಂದಲೂ ಕಾಗದ ಬಳಕೆ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದರು.

ಕನಿಷ್ಠಪಕ್ಷ ಸ್ವದೇಶಿ ಕಾಗದ ಮತ್ತು ಶಾಯಿ ಬಳಸಿ ನೋಟುಗಳನ್ನು ಮುದ್ರಿಸಬೇಕಿದೆ. ಇದು ಕೇವಲ ಸಾಂಕೇತಿಕವಲ್ಲ. ಬದಲಿಗೆ, ಭಾರತದಲ್ಲಿ ತಯಾರಿಸಿ ಎಂಬುದರ ನಿರ್ದಿಷ್ಟ ಆಲೋಚನಾ ಪ್ರಕ್ರಿಯೆಯ ಪ್ರತಿಬಿಂಬ ಎಂದರು.

ಸಾಂಪ್ರದಾಯಿಕ ವಿಧಾನದ ಬದಲಿಗೆ, ಅಭಿವೃದ್ಧಿಗೆ ಪೂರಕವಾದ ತಂತ್ರಜ್ಞಾನ ಅಳವಡಿಸಿಕೊಂಡು ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿಗೆ ಮುಂದಾಗುವ ಅಗತ್ಯವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.