ADVERTISEMENT

ಕಾಮಪ್ರಚೋದಕ ವೆಬ್‌ಸೈಟ್‌ ಸ್ಥಗಿತ

ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಜಾಲತಾಣಗಳಿಗೆ ಕತ್ತರಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ನವದೆಹಲಿ(ಪಿಟಿಐ): ಕಾಮಪ್ರಚೋದಕ ಮತ್ತು ಅಶ್ಲೀಲ ಅಂತರ್ಜಾಲ ತಾಣಗಳ ಸಂಪರ್ಕ ಸ್ಥಗಿತಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ  ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.

ದೇಶದ 857 ಕಾಮಪ್ರಚೋದಕ  ವೆಬ್‌ಸೈಟ್‌ಗಳ ಸೇವೆ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಅಂತರ್ಜಾಲ ಸೇವೆ ಒದಗಿಸುವ ಸಂಸ್ಥೆಗಳಿಗೆ ಸೂಚಿಸಿದ್ದು, ಶನಿವಾರ ರಾತ್ರಿಯಿಂದಲೇ ಈ ಜಾಲತಾಣಗಳ ಸಂಪರ್ಕ ಕಡಿತಗೊಂಡಿದೆ.

ವೆಬ್‌ಸೈಟ್‌ಗಳ ಸೆನ್ಸಾರ್‌ಗೆ ಮುಂದಾಗಿರುವ ಕೇಂದ್ರದ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ  ಟೀಕೆಗಳು ವ್ಯಕ್ತವಾಗುತ್ತಿವೆ. ಚಿತ್ರ ನಿರ್ದೇಶಕ ರಾಂ ಗೋಪಾಲ ವರ್ಮಾ, ಲೇಖಕ ಚೇತನ್‌ ಭಗತ್‌ ಸೇರಿದಂತೆ ಅನೇಕರು ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ  ಅಶ್ಲೀಲ ಜಾಲತಾಣಗಳಿಗೆ ಕತ್ತರಿ ಹಾಕಲಾಗಿದೆ ಎಂದು ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಕಾಮಪ್ರಚೋದಕ ವೆಬ್‌ಸೈಟ್ ನಿಷೇಧಕ್ಕೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
*
ಕಾಮಪ್ರಚೋದಕ ವೆಬ್‌ಸೈಟ್‌ಗಳ ಮೇಲಿನ ಸೆನ್ಸಾರ್‌ ಕ್ರಮ ಕೇವಲ ತಾತ್ಕಾಲಿಕ. ಈ ಬಗ್ಗೆ  ಇನ್ನೂ ಸುಪ್ರೀಂ ಕೋರ್ಟ್‌ ಅಂತಿಮ ಆದೇಶ ನೀಡಬೇಕಿದೆ.
ಕೇಂದ್ರ ಸರ್ಕಾರ
*
ಮುಖ್ಯಾಂಶಗಳು

* ಕೇಂದ್ರ ಸರ್ಕಾರದ ನೈತಿಕ ಪೊಲೀಸ್‌ಗಿರಿ ವಿರುದ್ಧ ಆಕ್ರೋಶ
* ಪೋರ್ನ್‌ಹಬ್‌,  ಎಕ್ಸ್‌ ವಿಡಿಯೊ, ಡೇಟಿಂಗ್ ಸೈಟ್‌ ಸಂಪರ್ಕ ಸ್ಥಗಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.