ADVERTISEMENT

ಕಾರವಾರಕ್ಕೆ ಅಮೆರಿಕ ರಕ್ಷಣಾ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2016, 19:30 IST
Last Updated 10 ಏಪ್ರಿಲ್ 2016, 19:30 IST
ಕಾರವಾರಕ್ಕೆ ಅಮೆರಿಕ ರಕ್ಷಣಾ ಕಾರ್ಯದರ್ಶಿ
ಕಾರವಾರಕ್ಕೆ ಅಮೆರಿಕ ರಕ್ಷಣಾ ಕಾರ್ಯದರ್ಶಿ   

ನವದೆಹಲಿ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಷ್ಟನ್‌ ಕಾರ್ಟರ್‌ ಅವರು ಸೋಮವಾರ ಬೆಳಿಗ್ಗೆ 11.20ಕ್ಕೆ ಕಾರವಾರಕ್ಕೆ ಬರಲಿದ್ದಾರೆ. ಅವರು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಅವರೊಂದಿಗೆ ಭಾರತದ ಅತ್ಯಾಧುನಿಕ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ವೀಕ್ಷಿಸಲಿದ್ದಾರೆ.

ನೌಕೆಯಲ್ಲಿಯೇ ಕಾರ್ಟರ್‌ ಅವರಿಗೆ ಮಧ್ಯಾಹ್ನದ ಭೋಜನದ ಏರ್ಪಾಡು ಮಾಡಲಾಗಿದೆ.  ಕಳೆದ ಡಿಸೆಂಬರ್‌ನಲ್ಲಿ ಪರಿಕ್ಕರ್‌ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅಣುಶಕ್ತಿ ಆಧರಿತ ಯುಎಸ್‌ಎಸ್‌ ಡ್ವೈಟ್‌ ಡಿ ಐಸೆನ್‌ಹೋವರ್‌ ನೌಕೆಯನ್ನು ಕಾರ್ಟರ್‌ ತೋಸಿದ್ದರು. ಸಮುದ್ರದಲ್ಲಿ ಅದರ ಕಾರ್ಯಾಚರಣೆಯನ್ನು ಪರಿಕ್ಕರ್‌ ವೀಕ್ಷಿಸಿದ್ದರು.

ಕಾರವಾರದಿಂದ ಇಬ್ಬರೂ ಗೋವಾಕ್ಕೆ ಮರಳಲಿದ್ದಾರೆ. ಅಲ್ಲಿ ಅಮೆರಿಕ ನೌಕಾಪಡೆಯ ಯುಎಸ್‌ಎಸ್‌ ಬ್ಲೂರಿಡ್ಜ್‌ ಲಂಗರು ಹಾಕಿದೆ. ಅಮೆರಿಕದ ಅತ್ಯಂತ ಹಳೆಯ ಈ ಯುದ್ಧ ನೌಕೆ ಇತ್ತೀಚೆಗೆ ಭಾರತಕ್ಕೆ ಬಂದಿದೆ.

ಪರಿಕ್ಕರ್‌ ಮತ್ತು ಕಾರ್ಟರ್‌ ನಡುವೆ ಬ್ಲೂರಿಡ್ಜ್‌ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ನಂತರ ಸಂಜೆ ಅವರು ದೆಹಲಿಗೆ ವಾಪಸಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.