ADVERTISEMENT

ಕಾರು ತೆರವುಗೊಳಿಸಿದ್ದಕ್ಕೆ ಕಾಲು ಹಿಡಿದು ಕ್ಷಮೆಯಾಚನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ಮೋರಿಗಾಂವ್ (ಪಿಟಿಐ): ಕಾರನ್ನು ರಸ್ತೆಯಿಂದ ತೆರವುಗೊಳಿಸಿದ್ದಕ್ಕೆ ಕಿರಿಯ ಎಂಜಿನಿಯರ್ (ಜೆಇ) ಒಬ್ಬರು ಶಾಸಕರ ಕಾಲು ಹಿಡಿದು ಕ್ಷಮೆ ಕೇಳುವಂತೆ ಬಲವಂತಪಡಿಸಿದ ಘಟನೆ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ನಡೆದಿದೆ.

ನಾಗಂವ್‌ನ ಕೊಥಿಯಾತೊಲಿ ಅಭಿವೃದ್ಧಿ ಮಂಡಳಿ (ಬಿಡಿಒ) ಎಂಜಿನಿಯರ್ ಜಯಂತ ದಾಸ್ ಅವರು ರಾಹಾ ಕ್ಷೇತ್ರದ ಶಾಸಕ ದಿಂಬೇಶ್ವರ್ ದಾಸ್ ಅವರ ಕಾಲು ಹಿಡಿದು ಕ್ಷಮೆ ಕೇಳುತ್ತಿರುವ ದೃಶ್ಯ ಸುದ್ದಿವಾಹಿನಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಾಸಕರು ಬಿಡಿಒ ಕಚೇರಿಗೆ ಗುರುವಾರ ಹಠಾತ್ ಭೇಟಿ ನೀಡಿದ್ದರು. ಆ ಸಂದರ್ಭ ರಸ್ತೆಯಲ್ಲಿ ನಿಲ್ಲಿಸಿದ್ದ ಅವರ ಕಾರಿನಿಂದ ಸಂಚಾರಕ್ಕೆ ತೊಡಕಾಗಿ ರುವುದನ್ನು ಗಮನಿಸಿದ ಜಯಂತ ದಾಸ್ ಅವರು ಅದನ್ನು ತೆರವು ಮಾಡಿಸಿದ್ದರು. ಇದರಿಂದ ಕೋಪಗೊಂಡ ಬೆಂಬಲಿಗರು ಶಾಸಕರಿಗೆ ಮಾಹಿತಿ ನೀಡಿದ್ದರು. ನಂತರ ಜಯಂತ ದಾಸ್ ಅವರು ಶಾಸಕರ ಕಾಲು ಹಿಡಿದು ಕ್ಷಮೆ ಕೋರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.