ADVERTISEMENT

ಕಾಲುವೆಗೆ ಬಸ್ ಉರುಳಿ ಬಿದ್ದು 10 ಸಾವು, 40 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 9:17 IST
Last Updated 28 ಫೆಬ್ರುವರಿ 2017, 9:17 IST
ಕೃಪೆ: ಟ್ವಿಟರ್ (ಎಎನ್‍ಐ)
ಕೃಪೆ: ಟ್ವಿಟರ್ (ಎಎನ್‍ಐ)   

ಕೃಷ್ಣಾ ಜಿಲ್ಲೆ (ಆಂಧ್ರಪ್ರದೇಶ): ಮಂಗಳವಾರ ಬೆಳಗ್ಗೆ ಖಾಸಗಿ ಬಸ್ಸೊಂದು ಕಾಲುವೆಗೆ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. 40 ಮಂದಿಗೆ ಗಾಯಗಳಾಗಿದ್ದು, ಹಲವಾರು ಮಂದಿ ಬಸ್ಸಿನ ಅಡಿಭಾಗದಲ್ಲಿ ಸಿಲುಕಿಕೊಂಡಿದ್ದಾರೆ.

ಬಸ್ಸಿನ ಮುಂದಿನ ಭಾಗ ಕಾಲುವೆಯೊಳಗೆ ಬಿದ್ದಿರುವ ಕಾರಣ ಸರಿಸುಮಾರು 60 ಮಂದಿ ಬಸ್ಸಿನೊಳಗೆ ಸಿಲುಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಒಡಿಶಾದ ಭುವನೇಶ್ವರ್‍ ದಿಂದ ತೆಲಂಗಾಣಕ್ಕೆ ಬರುತ್ತಿದ್ದ ಬಸ್ ಬೆಳಗ್ಗೆ 5.30ಕ್ಕೆ ಕಾಲುವೆಗೆ ಉರುಳಿ ಬಿದ್ದಿದೆ.

ADVERTISEMENT

ಚಾಲಕ ಆದಿ ನಾರಾಯಣ ಬಸ್  ಚಾಲನೆ ಮಾಡುತ್ತಿದ್ದಾಗ ನಿದ್ದೆ ಮಂಪರಿನಲ್ಲಿದ್ದನೆಂದು ಹೇಳಲಾಗುತ್ತಿದೆ. ವಿಜಯವಾಡದಿಂದ 600 ಕಿಮೀ ಕ್ರಮಿಸಿ ಮುಂದಕ್ಕೆ ಬಂದಾಗ ನಿಯಂತ್ರಣ ತಪ್ಪಿದ ಬಸ್ ರಸ್ತೆ ವಿಭಜಕಗೆ ಹೋಗಿ ಢಿಕ್ಕಿ ಹೊಡೆದು ಅಲ್ಲಿಂದ ಕಾಲುವೆಗೆ ಬಿದ್ದಿದೆ ಎಂದು ಬಲ್ಲಮೂಲಗಳು ಹೇಳಿವೆ.

ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ನಿದ್ದೆಯಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಸ್ಸಿನಲ್ಲಿದ್ದವರಲ್ಲಿ ಹೆಚ್ಚಿನ ಪ್ರಯಾಣಿಕರು ಭುವನೇಶ್ವರ್, ಹೈದರಾಬಾದ್, ವಿಶಾಖಪಟ್ಟಣಂ ಮತ್ತು ಶ್ರೀಕಾಕುಲಂ ಮೂಲದವರಾಗಿದ್ದಾರೆ.

ಅಪಘಾತ ಸ್ಥಳದಲ್ಲೇ ಏಳು ಮಂದಿ ಸಾವನ್ನಪ್ಪಿದ್ದು, ಓರ್ವ ಗಾಯಳು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮರಣವಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.