ADVERTISEMENT

ಕೇಂದ್ರದ ಒಪ್ಪಿಗೆ

ಕೈಗಾ ಅಣು ವಿದ್ಯುತ್‌ ಸ್ಥಾವರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2015, 19:30 IST
Last Updated 29 ಏಪ್ರಿಲ್ 2015, 19:30 IST

ನವದೆಹಲಿ (ಪಿಟಿಐ): ಕರ್ನಾಟಕದ ಕೈಗಾ ಒಳಗೊಂಡಂತೆ ಒಟ್ಟು 10 ತಾಣಗಳಲ್ಲಿ ಹೊಸ ಅಣು ವಿದ್ಯುತ್‌ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಈ ಹತ್ತು ತಾಣಗಳು ಒಂಬತ್ತು ರಾಜ್ಯಗಳಲ್ಲಿವೆ ಎಂದು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಬುಧವಾರ ಲೋಕಸಭೆಗೆ ತಿಳಿಸಿದರು.

ಕೈಗಾದಲ್ಲಿ ಈಗಾಗಲೇ ನಾಲ್ಕು ಅಣು ವಿದ್ಯುತ್ ಘಟಕಗಳಿವೆ. ಇದೀಗ ಐದು ಮತ್ತು ಆರನೇ ಘಟಕಗಳನ್ನು ಆರಂಭಿಸಲು ಒಪ್ಪಿಗೆ ಲಭಿಸಿದೆ.
‘ಹರಿಯಾಣದ ಗೋರಖ್‌ಪುರ, ಮಧ್ಯಪ್ರದೇಶದ ಚುಟ್ಕಾ ಮತ್ತು ಭೀಮಪುರ, ಕರ್ನಾಟಕದ ಕೈಗಾ ಹಾಗೂ ರಾಜಸ್ತಾನದ ಮಾಹಿ ಬನ್ಸ್ವಾರದಲ್ಲಿ ದೇಶೀಯವಾಗಿ ಸ್ಥಾವರಗಳನ್ನು ನಿರ್ಮಿಸಲಾಗುವುದು’ ಎಂದು ಅವರು ಹೇಳಿದರು.

‘ತಮಿಳುನಾಡಿನ ಕೂಡುಂಕುಳುಂ, ಮಹಾರಾಷ್ಟ್ರದ ಜೈತಾಪುರ, ಗುಜರಾತ್‌ನ ಚಾಯಾ ಮಿತಿವಿರ್ದಿ, ಆಂಧ್ರ ಪ್ರದೇಶದ ಕೊವ್ವಡ
ಮತ್ತುಪಶ್ಚಿಮ ಬಂಗಾಳದ ಹರಿ­ಪುರದಲ್ಲಿ ವಿದೇಶಿ ನೆರವಿನೊಂದಿಗೆ ಸ್ಥಾವರಗಳು ನಿರ್ಮಾಣವಾಗಲಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.