ADVERTISEMENT

ಕೇಂದ್ರ ನೌಕರರಿಗೆ ಒಂದೇ ಕಂತಿನಲ್ಲಿ ವೇತನ ಬಾಕಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2016, 0:30 IST
Last Updated 30 ಜುಲೈ 2016, 0:30 IST
ಕೇಂದ್ರ ನೌಕರರಿಗೆ ಒಂದೇ ಕಂತಿನಲ್ಲಿ ವೇತನ ಬಾಕಿ
ಕೇಂದ್ರ ನೌಕರರಿಗೆ ಒಂದೇ ಕಂತಿನಲ್ಲಿ ವೇತನ ಬಾಕಿ   

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ. 7ನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕರಿಸಿದ ವೇತನ ಬಾಕಿಯನ್ನು ಒಂದೇ ಕಂತಿನಲ್ಲಿ ಆಗಸ್ಟ್ ತಿಂಗಳ ಸಂಬಳದ ಜತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪರಿಷ್ಕೃತ ವೇತನವು 2016ರ ಜನವರಿ 1ರಿಂದ ಪೂರ್ವಾನ್ವಯವಾಗಿ ಜಾರಿಯಲ್ಲಿ ಬಂದಿದೆ. ವೇತನ ಆಯೋಗ ಒಟ್ಟಾರೆ ಶೇಕಡ 23.5ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಇದರಿಂದ ಬೊಕ್ಕಸಕ್ಕೆ ₹1.2 ಲಕ್ಷ ಕೋಟಿ ಹೆಚ್ಚುವರಿ ಹೊರೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.