ADVERTISEMENT

ಕೋವಿಂದ್‌ ವಿರುದ್ಧ ಮೀರಾ ಕುಮಾರ್‌ ಕಣಕ್ಕೆ

ಪಿಟಿಐ
Published 22 ಜೂನ್ 2017, 19:46 IST
Last Updated 22 ಜೂನ್ 2017, 19:46 IST
ಕೋವಿಂದ್‌ ವಿರುದ್ಧ ಮೀರಾ ಕುಮಾರ್‌ ಕಣಕ್ಕೆ
ಕೋವಿಂದ್‌ ವಿರುದ್ಧ ಮೀರಾ ಕುಮಾರ್‌ ಕಣಕ್ಕೆ   

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರ ವಿರುದ್ಧ ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಅವರನ್ನು ಕಣಕ್ಕಿಳಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.

ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯ ಆಯ್ಕೆಗಾಗಿ ಗುರುವಾರ 17 ವಿರೋಧ ಪಕ್ಷಗಳು ಸಭೆ ಸೇರಿದ್ದವು. ಪ್ರಸಿದ್ಧ ದಲಿತ ನಾಯಕ ಜಗಜೀವನ್‌ರಾಂ ಅವರ ಮಗಳು ಮೀರಾ ಅವರನ್ನು  ಈ ಸಭೆಯಲ್ಲಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು.

ಕೋವಿಂದ್‌ ಅವರು ದಲಿತ ಸಮುದಾಯಕ್ಕೆ ಸೇರಿದವರು. ವಿರೋಧ ಪಕ್ಷಗಳ ಅಭ್ಯರ್ಥಿ ಮೀರಾ ಕೂಡ ದಲಿತ ಸಮುದಾಯದವರು. ಹಾಗಾಗಿ ಈ ಬಾರಿ ರಾಷ್ಟ್ರಪತಿ ಚುನಾವಣೆ ಹಣಾಹಣಿ ಇಬ್ಬರು ದಲಿತರ ನಡುವೆಯೇ ನಡೆಯಲಿದೆ.

ADVERTISEMENT

ಮೀರಾ ಅವರನ್ನು ಸರ್ವಸಮ್ಮತಿಯಿಂದ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ ಹೇಳಿದರು.

ಸಭೆಯಲ್ಲಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಮೀರಾ ಕುಮಾರ್‌, ಮಾಜಿ ಕೇಂದ್ರ ಸಚಿವ ಸುಶೀಲ್‌ ಕುಮಾರ್‌ ಶಿಂಧೆ, ರಾಜ್ಯಸಭಾ ಸದಸ್ಯ ಬಾಲಚಂದ್ರ ಮುಂಗೇಕರ್‌ ಅವರ ಹೆಸರು ಸೂಚಿಸಿದರು. ಕೊನೆಯ ಇಬ್ಬರೂ ಮಹಾರಾಷ್ಟ್ರದ ದಲಿತ ಸಮುದಾಯಕ್ಕೆ ಸೇರಿದವರು.

ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ, ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರ ಹೆಸರನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರಸ್ತಾಪಿಸಿದರು. ಸರ್ವಸಮ್ಮತ ಅಭ್ಯರ್ಥಿಯಾಗಿ ಮೀರಾ ಅವರು ಹೊರಹೊಮ್ಮಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.