ADVERTISEMENT

ಕ್ರಮಕ್ಕೆ ಹಸಿರು ಪೀಠ ಆದೇಶ

ರೈಲು ಮಾರ್ಗಗಳಲ್ಲಿ ಮಾಲಿನ್ಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2014, 19:30 IST
Last Updated 19 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ರೈಲು ಮಾರ್ಗ­ಗಳ ಮಾಲಿನ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತ­ಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯ­ಪೀಠವು, ಹಳಿಗಳ ಮಾಲಿನ್ಯಕ್ಕೆ ಕಾರಣ­ರಾದ­ವರ ವಿರುದ್ಧ ಕಠಿಣ ಕ್ರಮ ಜರುಗಿ­ಸುವಂತೆ ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿದೆ.

ಇದುವರೆಗೆ ಎಷ್ಟು ಮಂದಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸ­ಲಾಗಿದೆ ಎಂಬ ವಿವರಗಳನ್ನು ಸಲ್ಲಿಸು­ವಂತೆ ನ್ಯಾಯ­ಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ಹಸಿರು ನ್ಯಾಯ­ಪೀಠವು ಉತ್ತರ ವಲಯ ರೈಲ್ವೆ ಜನರಲ್ ಮ್ಯಾನೇಜರ್‌ಗೆ ಆದೇಶಿಸಿದೆ.

ರೈಲು ಮಾರ್ಗ ಮತ್ತು ರೈಲ್ವೆ ಆಸ್ತಿ­ಪಾಸ್ತಿಗಳನ್ನು ಮಾಲಿನ್ಯಗೊಳಿಸು­ವುದು ಆಕ್ಷೇಪಾರ್ಹ. ಆದ್ದರಿಂದ 2012ರ ರೈಲ್ವೆ ಮಂಡಳಿ ನಿಯಮಗಳು ಮತ್ತು ಪರಿಸರ ಸಂರಕ್ಷಣೆ ಕಾಯ್ದೆಯ ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದು­ಕೊಳ್ಳ­ಬೇಕು ಎಂದು ಹಸಿರು ಪೀಠವು ಎಲ್ಲಾ ವಲಯಗಳ ಜನ­ರಲ್ ಮ್ಯಾನೇ­ಜರ್‌­ಗಳಿಗೆ ಸೂಚಿಸಿದೆ.

ರೈಲ್ವೆ ಮಂಡಳಿ ನಿಯಮಗಳ ಪ್ರಕಾರ, ಇಲಾಖೆಗೆ ಸೇರಿದ ಸ್ಥಳ­ಗಳಲ್ಲಿ ಉಗುಳ­ಬಾರು, ಮೂತ್ರ ವಿಸ­ರ್ಜನೆ ಮಾಡ­ಬಾರದು, ಅಡುಗೆ ಮಾಡು­­ವುದಕ್ಕೆ ಮತ್ತು ಪಾತ್ರ ತೊಳೆಯುವುದು ನಿಷೇಧ. ವಾಹನಗಳ ದುರಸ್ತಿ ಮತ್ತು ತೊಳೆಯು­ವುದು ಸಹ ನಿಷಿದ್ಧ. ಹೀಗಿ­ದ್ದರೂ ರೈಲ್ವೆ ಪೊಲೀಸರು, ರೈಲು ನಿಲ್ದಾ­ಣದ ಮುಖ್ಯ­ಸ್ಥರು, ಮೇಲ್ವಿ­ಚಾರಕರು ತಪ್ಪಿ­ತಸ್ಥರ ವಿರುದ್ಧ ಏಕೆ ಕ್ರಮ ತೆಗೆದು­ಕೊಳ್ಳುತ್ತಿಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿದೆ.

ವಿಮಾನದಲ್ಲಿ ಕೀಟನಾಶಕ ಸಿಂಪರಣೆ: ದೂರು

ನವದೆಹಲಿ (ಪಿಟಿಐ): ಪ್ರಯಾಣಿಕರು ವಿಮಾನದಲ್ಲಿರುವಾಗಲೇ ಕೀಟ ನಾಶಕ ಸಿಂಪಡಿಸಿದ ಬಗ್ಗೆ ಅಮೆರಿಕ ಮೂಲದ ನರ­ರೋಗ ತಜ್ಞರೊಬ್ಬರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠವು ಕೇಂದ್ರ ಸರ್ಕಾ­ರದ ಪ್ರತಿಕ್ರಿಯೆ ಕೇಳಿದೆ.

ಟೆಕ್ಸಾಸ್ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ಡಾ. ಜೈಕುಮಾರ್ ಅವರು ಇ–ಮೇಲ್ ಮೂಲಕ ನೀಡಿ­ರುವ ದೂರನ್ನು ಪರಿಗಣಿಸಿದ ಹಸಿರು ನ್ಯಾಯಪಿಠವು ಕೆಂದ್ರ ಸರ್ಕಾರಕ್ಕೆ ನೋಟಿಸ್ ನೀಡಿ ಮುಂದಿನ ವಿಚಾರಣೆ­ಯನ್ನು ಫೆಬ್ರುವರಿ 9ಕ್ಕೆ ನಿಗದಿಪಡಿಸಿದೆ.

ADVERTISEMENT

ಪರಿಸರ ಇಲಾಖೆಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಶೀಘ್ರದಲ್ಲಿ ವರದಿ­ಯನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಗು­ತ್ತದೆ ಎಂದು ಪರಿಸರ ಮತ್ತು ಅರಣ್ಯ ಇಲಾಖೆಯ ಪರ ವಕೀಲರು ತಿಳಿಸಿದರು.

ರೈಲು ಹಳಿಗಳ ಪಕ್ಕ ಇರುವ ಗುಡಿ­ಸಲು­ಗಳೇ ಮಾಲಿನ್ಯಕ್ಕೆ ಮುಖ್ಯ ಕಾರಣ. ಅವುಗಳನ್ನು ತೆರುವುಗೊಳಿಸಿ ಬದಲಿ ಕಟ್ಟಡ ನಿರ್ಮಿಸಲು ದೆಹಲಿ ಮಹಾ­ನಗರ ಪಾಲಿಕೆ ಸೇರಿದಂತೆ ಮೂರು ಪಾಲಿಕೆ­ಗಳಿಗೆ ಒಂದು ವರ್ಷದ ಹಿಂದೆಯೇ 1,125 ಕೋಟಿ ನೀಡ­ಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ತೆಗೆದು­ಕೊಂಡಿಲ್ಲ ಎಂದು ರೈಲ್ವೆ ಪರ ವಕೀಲರು ನ್ಯಾಯ­ಪೀಠಕ್ಕೆ ತಿಳಿಸಿದರು.

ಈ ತಿಂಗಳ 24ರಂದು ನಡೆಯಲಿ­ರುವ ವಿಚಾರಣೆ ಸಂದರ್ಭದಲ್ಲಿ ಮೂರು ಮಹಾನಗರ ಪಾಲಿಕೆಗಳ ಆಯುಕ್ತರು ಹಾಜರಿರಬೇಕು ಎಂದು ನ್ಯಾಯಪೀಠ ಆದೇಶಿಸಿದೆ. ವಕೀಲರಾದ ಸಲೋನಿ ಸಿಂಗ್ ಮತ್ತು ಆರುಷ್ ಪಠಾನಿಯಾ ಅವರು ಅರ್ಜಿ ಸಲ್ಲಿಸಿ, ರೈಲ್ವೆ ಪರಿಸರ ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.