ADVERTISEMENT

ಕ್ರಾಂತಿಕಾರಿ ಭಗತ್‌ಸಿಂಗ್ ಸಹೋದರಿ ನಿಧನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2014, 10:44 IST
Last Updated 29 ಸೆಪ್ಟೆಂಬರ್ 2014, 10:44 IST

ಚಂಡಿಗಢ್‌ (ಐಎಎನ್‌ಎಸ್): ಕ್ರಾಂತಿಕಾರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್‌ ಅವರ ಕಿರಿಯ ಸಹೋದರಿ ಪ್ರಕಾಶ್ ಕೌರ್‌ ಅವರು ಕೆನಡಾದಲ್ಲಿ ನಿಧನರಾಗಿದ್ದಾರೆಂದು ಅವರ ಕುಟುಂಬದ ಸದಸ್ಯರು ಸೋಮವಾರ ತಿಳಿಸಿದ್ದಾರೆ.

ಹುತಾತ್ಮ ಸಿಂಗ್‌ ಅವರ ಹತ್ತಿರದ ಸಂಬಂಧಿಯಾಗಿರುವ ಕೌರ್‌ ಅವರು ಟೊರೊಂಟೊದಲ್ಲಿ ವಾಸಿಸುತ್ತಿದ್ದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಪಂಜಾಬ್‌ನ ಹೋಶಿಯಾರ್‌ಪುರ್‌ನಲ್ಲಿ ನೆಲೆಸಿರುವ ಕೌರ್‌ರವರ ಅಳಿಯ ಹರಭಜನ್‌ ದತ್‌, ಭಾನುವಾರ ರಾತ್ರಿ ಕೌರ್‌ ಅವರು ನಿಧನರಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.