ADVERTISEMENT

ಗೋವುಗಳ ಕಳ್ಳ ಸಾಗಣೆ, ಲವ್ ಜಿಹಾದ್‍ ನಿಯಂತ್ರಿಸಲು 5000 'ಧಾರ್ಮಿಕ ಸೈನಿಕ'ರನ್ನು ನೇಮಕ ಮಾಡಲಿದೆ ವಿಹಿಂಪ?

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 11:39 IST
Last Updated 21 ಜುಲೈ 2017, 11:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಲಿಗಢ: ಗೋವುಗಳ ಕಳ್ಳ ಸಾಗಣೆ, ಲವ್ ಜಿಹಾದ್‍ ನಿಯಂತ್ರಿಸಲು ವಿಶ್ವ ಹಿಂದೂ ಪರಿಷತ್ 5000 'ಧಾರ್ಮಿಕ ಸೈನಿಕ'ರನ್ನು ನೇಮಕ ಮಾಡಲಿದೆ. ಈ ಧಾರ್ಮಿಕ ಸೈನಿಕರು ಕಮಾಂಡೊಗಳಂತೆ ಕಾರ್ಯವೆಸಗಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಬಜರಂಗದಳದ ಕಾರ್ಯಕರ್ತರನ್ನು ಈ ಕಾರ್ಯಕ್ಕೆ ನೇಮಕ ಮಾಡಲಾಗುವುದು. ಸೈನಿಕರ ನೇಮಕ ಪ್ರಕ್ರಿಯೆ ಸೆಪ್ಟೆಂಬರ್‍‍ನಲ್ಲಿ ಆರಂಭವಾಗಲಿದೆ.

ಜುಲೈ 14- 16ರ ವರೆಗೆ ಅಲಿಗಢದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ವಿಹಿಂಪ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಉಪಸ್ಥಿತರಿದ್ದರು.

ADVERTISEMENT

ಧಾರ್ಮಿಕ ಸೈನಿಕರನ್ನು ನೇಮಕ ಮಾಡುವ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿದ ವಿಹಿಂಪ ವಿಭಾಗೀಯ ಮುಖ್ಯಸ್ಥ ರಾಮ್ ಕುಮಾರ್ ಆರ್ಯ, ಬಜರಂಗದಳದಲ್ಲಿ ತರಬೇತಿ ಪಡೆದಿರುವ ಕಾರ್ಯಕರ್ತರನ್ನು ಆಲಿಗಢ ಜಿಲ್ಲೆಯಲ್ಲಿ ಧಾರ್ಮಿಕ ಸೈನಿಕರಾಗಿ ನೇಮಕ ಮಾಡಲಾಗುವುದು. ಈ ಸೈನಿಕರು ಗೋವುಗಳ ಕಳ್ಳ ಸಾಗಣೆ ಮತ್ತು ಲವ್ ಜಿಹಾದ್‍ನ್ನು ನಿಯಂತ್ರಿಸಲಿದ್ದಾರೆ. ಅಷ್ಟೇ ಅಲ್ಲದೆ ಹಿಂದೂ ಹುಡುಗ-ಹುಡುಗಿ, ಮಠ, ಸಂತ ಸಮಾಜ ಮತ್ತು ದೇಶದ ರಕ್ಷಣೆಗೆ ಈ ಸೈನಿಕರು ಬದ್ಧರಾಗಿರುತ್ತಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.