ADVERTISEMENT

ಚೀನಾದ ವುಹಾನ್‌ಗೆ ಬಂದಿಳಿದ ಪ್ರಧಾನಿ ಮೋದಿ

ಏಜೆನ್ಸೀಸ್
Published 27 ಏಪ್ರಿಲ್ 2018, 3:00 IST
Last Updated 27 ಏಪ್ರಿಲ್ 2018, 3:00 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಬೀಜಿಂಗ್‌: ಚೀನಾದ ವುಹಾನ್‌ ನಗರದಲ್ಲಿ ಏ. 27 (ಶುಕ್ರವಾರ)ದಿಂದ ಎರಡು ದಿನ ನಡೆಯಲಿರುವ ಅನೌಪಚಾರಿಕ ಶೃಂಗಸಭೆಯ ಅಂಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿಗೆ ಬಂದಿಳಿದರು.

ಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಮಾತುಕತೆ ನಡೆಸಲಿದ್ದಾರೆ.

ಈ ಇಬ್ಬರು ನಾಯಕರ ಭೇಟಿಯಿಂದ ಎರಡು ರಾಷ್ಟ್ರಗಳ ಬಾಂಧವ್ಯದ ಬಗೆಗಿನ ಪ್ರಾಮಾಣಿಕ ಚರ್ಚೆಯ ಆರಂಭ ಆಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ADVERTISEMENT

ಭಿನ್ನಾಭಿಪ್ರಾಯ ಹಾಗೂ ಬಿಕ್ಕಟ್ಟುಗಳಿಂದಾಗಿ ಕುಸಿದಿರುವ ಬಾಂಧವ್ಯಕ್ಕೆ ಹೊಸ ಚೈತನ್ಯ ತುಂಬಲು ಇಬ್ಬರೂ ನಾಯಕರು ಪ್ರಯತ್ನ ನಡೆಸಲಿದ್ದಾರೆ.

ಭೇಟಿ ವೇಳೆ ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ ಎಂದು ಎರಡೂ ರಾಷ್ಟ್ರಗಳು ಈಗಾಗಲೇ ಹೇಳಿವೆ. ಭವಿಷ್ಯದ ದೃಷ್ಟಿಯಿಂದ ಪರಸ್ಪರ ಅರ್ಥೈಸಿಕೊಳ್ಳುವ ಪ್ರಕ್ರಿಯೆಯ ಭಾಗ ಇದು ಎಂದು ಸ್ಪಷ್ಟಪಡಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.