ADVERTISEMENT

ಚುನಾವಣಾ ಆಯೋಗ ಪ್ರಸ್ತಾವ

ಹೇಯ ಅಪರಾಧ ಪ್ರಕರಣ ಆರೋಪಿಗಳಿಗೂ ಸ್ಪರ್ಧೆಗೆ ಅವಕಾಶ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಹೇಯ ಅಪ­ರಾಧ ಪ್ರಕರಣಗಳಲ್ಲಿ ಕೋರ್ಟ್‌ನಿಂದ ಆರೋಪ ನಿಗದಿಗೆ ಒಳಪಟ್ಟ ಆರೋಪಿ­ಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲು ಚುನಾವಣಾ ಆಯೋಗ ಮುಂದಾಗಿದೆ. ಈ ನಿಟ್ಟಿನಲ್ಲಿ ಕಾನೂನು  ಸಚಿವಾಲಯಕ್ಕೆ ಪ್ರಸ್ತಾವ ಕಳುಹಿಸಿದೆ.

ಕನಿಷ್ಠ ಐದು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗುವಂತಹ ಅಪರಾಧ ಪ್ರಕರಣಗಳಲ್ಲಿ ಚುನಾವಣೆ ಘೋಷಣೆ­ಯಾಗುವುದಕ್ಕೂ ಆರು ತಿಂಗಳ ಮೊದಲು ನ್ಯಾಯಾಲಯದಿಂದ ಆರೋಪ ನಿಗದಿಯಾಗಿದ್ದರೆ ಅಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸ­ದಂತೆ ತಡೆಯಬೇಕು ಎಂದು ಆಯೋಗ ಕೋರಿದೆ.

‘ನಾಮಪತ್ರದ ಜೊತೆ ಸಲ್ಲಿಸುವ ಪ್ರಮಾಣ ಪತ್ರಗಳಲ್ಲಿ ತಪ್ಪು ಮಾಹಿತಿ ನೀಡಿದ್ದರೆ, ಅಂತಹವರ ಸದಸ್ಯತ್ವವನ್ನು ರದ್ದು ಪಡಿಸಲು ಮತ್ತು ತಪ್ಪು ಮಾಹಿತಿ ನಮೂದಿಸಿದ್ದಕ್ಕೆ ಶಿಕ್ಷೆ ಕೂಡ ವಿಧಿಸಲು ಕಟ್ಟುನಟ್ಟಿನ ಕಾನೂನು ಅಗತ್ಯವಿದೆ’ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ವಿ.ಎಸ್. ಸಂಪತ್ ತಿಳಿಸಿದರು.

ಈ ಪ್ರಸ್ತಾವವನ್ನು ಕಾನೂನು ಸಚಿವಾಲಯ ಕಾನೂನು ಆಯೋಗದ ಪರಿಶೀಲನೆಗೆ ಕಳುಹಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.