ADVERTISEMENT

ಚುಮಾರ್‌ನಲ್ಲಿ ಚೀನಾ ಸೈನಿಕರ ದಂಡು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 13:10 IST
Last Updated 18 ಸೆಪ್ಟೆಂಬರ್ 2014, 13:10 IST

ಲೇಹ್‌/ ನವದೆಹಲಿ (ಪಿಟಿಐ):  ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಗಡಿಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದರೆ ಇತ್ತ ಲೇಹ್‌ ಗಡಿಯಲ್ಲಿ ಉದ್ವಿಗ್ನತೆ ಮುಂದುವರಿದಿದೆ.  ಚೀನಾ  ಸೇನೆಯು ಲೇಹ್‌ ಗಡಿಯಲ್ಲಿರುವ ಚುಮಾರ್‌ ಗ್ರಾಮಕ್ಕೆ  ಹೆಚ್ಚಿನ  ಸೈನಿಕರನ್ನು ರವಾನಿಸುತ್ತಿದೆ.

ಗಡಿ ಸಮಸ್ಯೆ ಬಗ್ಗೆ  ಉಭಯ ದೇಶಗಳು ಮಾತುಕತೆ ನಡೆಸುತ್ತಿದ್ದರು ಚೀನಾ ಸೇನಾ ತುಕಡಿಗಳನ್ನು ಭಾರತದತ್ತ ಕಳುಹಿಸುತ್ತಿದೆ. 
ಚುಮಾರ್‌ನಲ್ಲಿ ಭಾರತೀಯ ರೈತ ಕಾರ್ಮಿಕರು ನೀರಾವರಿಗಾಗಿ ಕಾಲುವೆ ನಿರ್ಮಿಸುತ್ತಿರುವುದಕ್ಕೆ ಚೀನಾ ಆಕ್ಷೇಪವೆತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಚುಮಾರ್‌ಗೆ ಚೀನಾವು ಬುಧವಾರ ಬೆಳಗ್ಗೆಯಿಂದ ಸುಮಾರು 500ಮಂದಿ ಸೈನಿಕರನ್ನು ರವಾನಿಸಿದೆ. ಅಷ್ಟೇ ಸಂಖ್ಯೆಯ ಭಾರತೀಯ ಸೈನಿಕರು ಆ ಭಾಗದಲ್ಲಿ ಬೀಡುಬಿಟ್ಟಿದ್ದಾರೆ. ಗಡಿಯಲ್ಲಿ ಎರಡು ಸೇನೆಗಳು ಕನಿಷ್ಠ 200ಮೀಟರ್‌ಗಳಷ್ಟು ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ಭಾರತದ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT