ADVERTISEMENT

ಚೆನ್ನೈನ ಅಪೋಲೊ ಆಸ್ಪತ್ರೆಗೆ ಏಮ್ಸ್‌ ತಜ್ಞರ ತಂಡ

ಪಿಟಿಐ
Published 5 ಡಿಸೆಂಬರ್ 2016, 6:46 IST
Last Updated 5 ಡಿಸೆಂಬರ್ 2016, 6:46 IST
ಚೆನ್ನೈನ ಅಪೋಲೊ ಆಸ್ಪತ್ರೆಗೆ ಏಮ್ಸ್‌ ತಜ್ಞರ ತಂಡ
ಚೆನ್ನೈನ ಅಪೋಲೊ ಆಸ್ಪತ್ರೆಗೆ ಏಮ್ಸ್‌ ತಜ್ಞರ ತಂಡ   

ನವದೆಹಲಿ: ಹೃದಯಾಘಾತಕ್ಕೊಳಗಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ 'ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ’ಯ (ಏಮ್ಸ್‌) ತಜ್ಞರ ತಂಡವನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ಸೋಮವಾರ ಕಳುಹಿಸಿಕೊಟ್ಟಿದೆ.

ನಾಲ್ವರು ತಜ್ಞರ ತಂಡ ಅಪೋಲೊ ಆಸ್ಪತ್ರೆ ತಲುಪಿ ಚಿಕಿತ್ಸೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ.

ಅಪೋಲೊ ಆಸ್ಪತ್ರೆ ಹಾಗೂ ತಮಿಳುನಾಡು ಸರ್ಕಾರ ಸಂಪರ್ಕದಲ್ಲಿದ್ದು, ಏಮ್ಸ್‌ನ ನಾಲ್ವರು ತಜ್ಞರ ತಂಡವನ್ನು ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.