ADVERTISEMENT

ಜಿಎಸ್‌ಟಿ ಪ್ರಭಾವ ಸಕ್ಕರೆ ದರ ಶೇ 3ರಷ್ಟು ಅಗ್ಗ

ಪಿಟಿಐ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಜಿಎಸ್‌ಟಿ ಪ್ರಭಾವ ಸಕ್ಕರೆ ದರ ಶೇ 3ರಷ್ಟು ಅಗ್ಗ
ಜಿಎಸ್‌ಟಿ ಪ್ರಭಾವ ಸಕ್ಕರೆ ದರ ಶೇ 3ರಷ್ಟು ಅಗ್ಗ   

ನವದೆಹಲಿ: ಜುಲೈ 1 ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ಜಾರಿಗೆ ಬರುತ್ತಿದ್ದಂತೆ, ತೆರಿಗೆ ಹೊರೆ ಕಡಿಮೆಯಾಗುವುದರಿಂದ ಸಕ್ಕರೆ, ಚಹ, ಇನ್‌ಸ್ಟಂಟ್‌ ಹೊರತುಪಡಿಸಿದ ಕಾಫಿ ಮತ್ತು ಹಾಲಿನ ಪುಡಿ ಅಗ್ಗವಾಗಲಿವೆ.

ಸದ್ಯಕ್ಕೆ  ಪ್ರತಿ 1 ಕ್ವಿಂಟಲ್‌ ಸಕ್ಕರೆಗೆ  ಕೇಂದ್ರೀಯ ಅಬಕಾರಿ ಸುಂಕವು ₹ 71ರಷ್ಟಾಗುತ್ತದೆ. ಜತೆಗೆ ₹ 124ರಷ್ಟು ಸೆಸ್‌ ವಿಧಿಸಲಾಗುತ್ತಿದೆ.  ಕೇಂದ್ರೀಯ ಮಾರಾಟ ತೆರಿಗೆ (ಸಿಎಸ್‌ಟಿ), ಆಕ್ಟ್ರಾಯ್‌ ಮತ್ತು ಪ್ರವೇಶ ತೆರಿಗೆ ಸೇರಿಗೆ ಒಟ್ಟು ತೆರಿಗೆ  ಪ್ರಮಾಣ ಶೇ 8ರಷ್ಟಾಗುತ್ತದೆ.

‘ಜಿಎಸ್‌ಟಿ’ಯಡಿ, ಶೇ 5ರ ತೆರಿಗೆ ದರ ವ್ಯಾಪ್ತಿಯಲ್ಲಿ ಸಕ್ಕರೆ ಬರಲಿದೆ. ಸದ್ಯದ ಶೇ  8ರ ತೆರಿಗೆ ದರಕ್ಕೆ ಹೋಲಿಸಿದರೆ ಶೇ 3ರಷ್ಟು ಅಗ್ಗವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಚಹ, ಇನ್‌ಸ್ಟಂಟ್‌ ಹೊರತುಪಡಿಸಿದ ಕಾಫಿ ಮತ್ತು ಹಾಲಿನ ಪುಡಿಗಳ ಮೇಲಿನ ತೆರಿಗೆ ಹೊರೆಯು ಕೂಡ ಸದ್ಯದ ಶೇ 7ರಿಂದ ಶೇ 5ಕ್ಕೆ ಇಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.