ADVERTISEMENT

ಜುಲೈ 30ರಂದು ಯಾಕೂಬ್ ಮೆಮನ್‌ಗೆ ಗಲ್ಲು

1993ರ ಮುಂಬೈ ಸರಣಿ ಸ್ಫೋಟದ ಸಂಚುಕೋರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2015, 6:28 IST
Last Updated 15 ಜುಲೈ 2015, 6:28 IST

ನಾಗಪುರ (ಐಎಎನ್‌ಎಸ್‌): ವಾಣಿಜ್ಯ ನಗರಿ ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರ ಯಾಕೂಬ್‌ ಅಬ್ದುಲ್‌ ರಜಾಕ್‌ ಮೆಮನ್‌ನನ್ನು (53) ಜುಲೈ 30 ರಂದು ಗಲ್ಲಿಗೇರಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ನಾಗಪುರ ಕೇಂದ್ರ ಕಾರಾಗೃಹದಲ್ಲಿ ಜುಲೈ 30 ರಂದು ಬೆಳಿಗ್ಗೆ ಮೆಮನ್‌ನನ್ನು ಗಲ್ಲಿಗೇರಿಸಲಾಗುವುದು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಧೃಡಪಡಿಸಿದ್ದಾರೆ. ಆದರೆ, ಅವರು ತಮ್ಮ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಮೆಮನ್‌ ಸಲ್ಲಿಸಿದ್ದ ದಯಾ ಅರ್ಜಿಯನ್ನು ಇತ್ತೀಚೆಗೆ ರಾಷ್ಟ್ರಪತಿ ಅವರು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 
ಪಿ.ಸದಾಶಿವಂ ಹಾಗೂ ಬಿ.ಎಸ್‌.ಚೌಹಾಣ್‌ ಅವರಿದ್ದ ಪೀಠ   ಮಾರ್ಚ್‌ 21ರಂದು ಮೆಮನ್‌ ಗಲ್ಲು ಶಿಕ್ಷೆಯನ್ನು ಸಮರ್ಥಿಸಿತ್ತು. ಈ ಪ್ರಕರಣದಲ್ಲಿ ಇನ್ನಿತರ ಹತ್ತು ಮಂದಿಗೆ ವಿಶೇಷ ಟಾಡಾ ನ್ಯಾಯಾ­ಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಪೀಠ ಜೀವಾವಧಿಗೆ ಪರಿವರ್ತಿಸಿತ್ತು. ಆರ್‌ಡಿಎಕ್ಸ್‌ ಇಡಲಾಗಿದ್ದ ವಾಹನಗ­ಳನ್ನು ಮುಂಬೈನ ವಿವಿಧ ಕಡೆ ನಿಲ್ಲಿಸಿದ್ದ ಆರೋಪ ಈ ಹತ್ತು ಮಂದಿಯ ಮೇಲಿದೆ.

ಯಾಕೂಬ್‌ ಮೆಮನ್‌ ಯಾರು?: ವೃತ್ತಿಯಲ್ಲಿ ಚಾರ್ಟರ್ಡ್‌ ಅಕೌಂಟಂಟ್‌ ಆಗಿರುವ ಮೆಮನ್‌ ಭೂಗತ ಪಾತಕಿ ಟೈಗರ್‌ ಮೆಮನ್‌ನ  ಸಹೋದರ.1993ರ ಸ್ಫೋಟದಲ್ಲಿ  257 ಮಂದಿ ಮೃತಪಟ್ಟಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT