ADVERTISEMENT

ಟೆಕ್ಕಿ ಹತ್ಯೆ: ಇನ್ನೂ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2014, 19:30 IST
Last Updated 5 ಜೂನ್ 2014, 19:30 IST

ಪುಣೆ (ಪಿಟಿಐ): ಸಾಫ್ಟ್‌ವೇರ್‌ ಉದ್ಯೋಗಿ ಶೇಖ್ ಮೊಹಸಿನ್‌ ಸಾದಿಕ್‌ ಎಂಬವರ  ಕೊಲೆ ಸಂಬಂಧ ಹಿಂದೂ ರಾಷ್ಟ್ರ ಸೇನಾ ಸಂಘಟನೆಯ ಇನ್ನೂ ನಾಲ್ವರು ಕಾರ್ಯ­ಕರ್ತರನ್ನು ಪೊಲೀಸರು ಬುಧವಾರ ತಡ ರಾತ್ರಿ ಬಂಧಿಸಿದ್ದಾರೆ.

ಶಿವಾಜಿ ಮತ್ತು ಶಿವಸೇನಾ ಮಾಜಿ ಮುಖ್ಯಸ್ಥ ಬಾಳ ಠಾಕ್ರೆ ಅವರ ಅವಹೇಳನ­ಕಾರಿ ಚಿತ್ರಗ­ಳನ್ನು ಫೇಸ್‌ಬುಕ್‌­ನಲ್ಲಿ ಪ್ರಕಟಿಸಿರು­ವುದು ಕೊಲೆಗೆ ಕಾರಣವಾಗಿದ್ದು, ಈ ಸಂಬಂಧ ಈಗಾಗಲೇ 13 ಜನ ಕಾರ್ಯ­ಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಟೆಕ್ಕಿ ಹತ್ಯೆ ಸಂಬಂಧ ಹಿಂದೂ ರಾಷ್ಟ್ರ ಸೇನಾ ಸಂಘಟ­ನೆಯ ಮುಖ್ಯಸ್ಥ  ಧನಂಜಯ್‌ ದೇಸಾಯಿ ಅವರನ್ನು ಸಹ   ಪೊಲೀಸರು ಬಂಧಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಚಿತ್ರ ಪ್ರಕಟವಾಗಿರುವುದರ ವಿರುದ್ಧ ಪ್ರಚೋದನಕಾರಿ ಸಂದೇಶ ನೀಡಿದ್ದ ಧನಂಜಯ್‌ ದೇಸಾಯಿ ಅವ­ರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗೊಂಡಿದ್ದರು.  ಬುಧವಾರ ಮತ್ತೆ ಅವ­ರನ್ನು ಪ್ರಚೋದನಕಾರಿ ಕರಪತ್ರ ಹಂಚಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ‘ಫೇಸ್‌ಬುಕ್‌­ನಲ್ಲಿ ಪ್ರಕಟವಾಗಿರುವ ಚಿತ್ರ ಅತ್ಯಂತ ನೋವು ತಂದಿದೆ. ಹಾಗಾಗಿ ಸ್ವಲ್ಪ ಮಟ್ಟಿನ ಪರಿಣಾಮ ಸಹಜ’ ಎಂದು ಪುಣೆ ಸಂಸದ ಅನಿಲ್‌ ಶಿರೋಲ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.