ADVERTISEMENT

ಟ್ವಿಟರ್‌ನಲ್ಲಿ ಪ್ರಧಾನಿ ಧನ್ಯವಾದ

​ಪ್ರಜಾವಾಣಿ ವಾರ್ತೆ
Published 26 ಮೇ 2014, 19:30 IST
Last Updated 26 ಮೇ 2014, 19:30 IST

ನವದೆಹಲಿ (ಪಿಟಿಐ):  ಪ್ರಧಾನಿ­ಯಾಗಿ ಪ್ರಮಾಣ ವಚನ ಸ್ವೀಕರಿಸುವು­ದನ್ನು ವೀಕ್ಷಿಸಿದ ದೇಶದ ಜನತೆಗೆ ಧನ್ಯವಾದ ಹೇಳಲು ನರೇಂದ್ರ ಮೋದಿ ಅವರು ಟ್ವಿಟರ್‌ ಬಳಸಿಕೊಂಡರು. 

ದೇಶದ 15ನೇ ಪ್ರಧಾನಿಯಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಒಂದು ಗಂಟೆ ಮೊದಲು ಟ್ವೀಟ್‌  ಮೂಲಕ  ಅವರು ಧನ್ಯವಾದ ಹೇಳಿದರು.

‘ಜೀವನದ ಎಲ್ಲಾ ರಂಗಗಳ ಜನರು ಪ್ರಮಾಣ ವಚನ ಸ್ವೀಕಾರ ಸಮಾ­ರಂಭದಲ್ಲಿ ಭಾಗವಹಿಸುತ್ತಿರುವುದು ನನಗೆ ಖುಷಿ ಮತ್ತು ಗೌರವ ತಂದಿದೆ. ಎಲ್ಲರನ್ನೂ ನಾನು ಸ್ವಾಗತಿಸುತ್ತೇನೆ’ ಎಂದು ಮೋದಿ ಟ್ವೀಟ್‌ ಮಾಡಿದ್ದರು.

‘ಸಮಾರಂಭವನ್ನು ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಿಸಲಿರುವ ನನ್ನ ಎಲ್ಲಾ ಗೆಳೆಯರಿಗೆ ಧನ್ಯವಾದ. ನಿಮ್ಮ ನಿರಂತರ ಬೆಂಬಲ ಮತ್ತು ಹಾರೈಕೆ ನನಗೆ ದೊಡ್ಡ ಆಶೀರ್ವಾದ’ ಎಂದೂ ಅವರು ಟ್ವಿಟರ್‌ನಲ್ಲಿ ಬರೆದಿದ್ದರು.

ಅನಾರೋಗ್ಯದ ಕಾರಣದಿಂದಾಗಿ ಸಮಾರಂಭದಲ್ಲಿ ಹಾಜರಾಗಲು ಸಾಧ್ಯ­ವಾಗದೇ ಹೋದ ಖ್ಯಾತ ಗಾಯಕಿ  ಲತಾ ಮಂಗೇಶ್ಕರ್‌ ಅವರಿಗೂ ಮೋದಿ ಕೃತಜ್ಞತೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.