ADVERTISEMENT

ಡೀಸೆಲ್‌ ದರ ಲೀಟರ್‌ಗೆ ₨1.09 ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 12 ಮೇ 2014, 19:30 IST
Last Updated 12 ಮೇ 2014, 19:30 IST

ನವದೆಹಲಿ (ಪಿಟಿಐ): ಅಂತಿಮ ಹಂತದ ಚುನಾವಣೆ ಮುಗಿ­ಯು­ತ್ತಿದ್ದಂತೆ ಡೀಸೆಲ್‌ ದರ ಲೀಟರ್‌ಗೆ ₨1.09 (ಸ್ಥಳೀಯ ತೆರಿಗೆ ಬಿಟ್ಟು) ಹೆಚ್ಚಳವಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ.

2013ರಲ್ಲಿ ಕೇಂದ್ರ ಸಂಪುಟ ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ ಪ್ರತಿ ತಿಂಗಳು ಡೀಸೆಲ್‌ ಬೆಲೆಯಲ್ಲಿ   ಸ್ವಲ್ಪ ಹೆಚ್ಚಳ ಮಾಡಬೇಕಿತ್ತು. ‘ಚುನಾವಣೆ ಘೋಷಣೆಯಾದ ಕಾರಣ ಬೆಲೆ ಏರಿಕೆ ಮಾಡುವುದಿಲ್ಲ. ಅದಕ್ಕೆ ಒಪ್ಪಿಗೆ ನೀಡಬೇಕು’ ಎಂಬ ಪ್ರಸ್ತಾವವನ್ನು ಚುನಾವಣಾ ಆಯೋಗಕ್ಕೆ ಪೆಟ್ರೋ­ಲಿಯಂ ಸಚಿವಾಲಯ ಕಳೆದ ತಿಂಗಳು ಕಳುಹಿಸಿತ್ತು. ಆದರೆ ಈ ಪ್ರಸ್ತಾಪ­ವನ್ನು ಆಯೋಗ ಸೋಮವಾರ ತಿರಸ್ಕರಿಸಿತು. 

ಆಯೋಗ ತೀರ್ಮಾನ ಕೈಗೊಳ್ಳಲು ವಿಳಂಬ ಮಾಡಿದ್ದರಿಂದ ಏಪ್ರಿಲ್‌ 1 ಮತ್ತು ಮೇ 1 ರಂದು ತಲಾ 50 ಪೈಸೆ ಏರಿಕೆ ಜಾರಿಗೆ ತಂದಿರಲಿಲ್ಲ.

2013 ರ ಮೇ ತಿಂಗಳಲ್ಲಿ  ಕರ್ನಾಟಕದಲ್ಲಿ ವಿಧಾನಸಭೆ ಚುನಾ­ವಣೆ ಇದ್ದ ಕಾರಣ ಆ ಏಪ್ರಿಲ್‌­ನಲ್ಲಿ ಡೀಸೆಲ್ ಬೆಲೆ ಏರಿಸಿರಲಿಲ್ಲ.  ಚುನಾ­ವಣೆ ಮುಗಿದ ನಂತರ ದಿಢೀರನೆ ಪ್ರತಿ ಲೀಟರ್‌ಗೆ ₨90 ಪೈಸೆಯನ್ನು ಏರಿಕೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.