ADVERTISEMENT

ತುಟ್ಟಿಭತ್ಯೆ ಏರಿಕೆಗೆ ಕೇಂದ್ರದ ಚಿಂತನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ವ್ಯತ್ಯಯ ತುಟ್ಟಿಭತ್ಯೆಯನ್ನು ಶೇಕಡ ನೂರರಿಂದ ಶೇಕಡ 107ಕ್ಕೆ ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ತುಟ್ಟಿಭತ್ಯೆಯು ಶೇಕಡ 107ಕ್ಕೆ ಏರಿಕೆಯಾದರೆ ಕೇಂದ್ರ ಸರ್ಕಾರದ 30 ಲಕ್ಷ ನೌಕರರು ಮತ್ತು 50 ಲಕ್ಷ ಪಿಂಚಿಣಿದಾರ­ರಿಗೆ ಲಾಭವಾಗಲಿದೆ.

2013ರ ಜುಲೈ 1ರಿಂದ 2014ರ ಜೂನ್ 30ರ ಅವಧಿ­ಯಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡ 7.25ರಷ್ಟು ಏರಿಕೆ ಆಗಿರುವುದರಿಂದ ಕೇಂದ್ರ ಸರ್ಕಾರವು ತನ್ನ ನೌಕರರ ವ್ಯತ್ಯಯ ತುಟ್ಟಿ ಭತ್ಯೆಯನ್ನು ಶೇಕಡ ಏಳರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ.

ADVERTISEMENT

ಹಣಕಾಸು ಸಚಿವಾಲಯ ಸದ್ಯದಲ್ಲಿಯೇ ಸಚಿವ ಸಂಪುಟದ ಎದುರು ಈ ಪ್ರಸ್ತಾವ ಇಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.