ADVERTISEMENT

ತೆರಿಗೆ ಕಡಿತ ಮಿತಿ ರೂ 4.44 ಲಕ್ಷಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2015, 11:21 IST
Last Updated 28 ಫೆಬ್ರುವರಿ 2015, 11:21 IST

ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದ್ದರೂ, 80ಸಿ, 80ಸಿಸಿಡಿ  ಸೇರಿದಂತೆ ವಿವಿಧ ಸೆಕ್ಸನ್‌ಗಳಡಿ ನೀಡುವ ಒಟ್ಟಾರೆ ತೆರಿಗೆ ಕಡಿತ ಮಿತಿಯನ್ನು ಸರ್ಕಾರ ರೂ 4.44 ಲಕ್ಷಕ್ಕೆ ಏರಿಕೆ  ಮಾಡಿದೆ. ಇದರಿಂದ ತೆರಿಗೆ ಪಾವತಿದಾರನೊಬ್ಬ ವಾರ್ಷಿಕ ರೂ 4,44,200 ಮೊತ್ತದವರೆಗೆ ತೆರಿಗೆ ವಿನಾಯ್ತಿ ಪಡೆಯಬಹುದು.

ತೆರಿಗೆ ಕಡಿತದ ವಿವರ ಇಲ್ಲಿದೆ
80ಸಿ ಸೆಕ್ಸನ್‌ನಡಿ ಕಡಿತದ ಮಿತಿ                             ರೂ 1,50,00
80ಸಿಸಿಡಿ ಸೆಕ್ಸನ್‌ನಡಿ ಕಡಿತದ ಮಿತಿ                        ರೂ 50,00
ಗೃಹ/ನಿವೇಶನ ಸಾಲದ ಮೇಲಿನ ಬಡ್ಡಿ ಕಡಿತದ ಮಿತಿ      ರೂ  2,00,000
80ಡಿಯಡಿ ಆರೋಗ್ಯ ವಿಮೆ ಕಂತು ಕಡಿತ ಮಿತಿ             ರೂ 25,000
ಪ್ರಯಾಣ ಭತ್ಯೆ ವಿನಾಯ್ತಿ                                        ರೂ 19,200
ಒಟ್ಟು                                                               ರೂ 4,44,200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.