ADVERTISEMENT

ತೇವಾಂಶದ ಭೂಮಿ ಕಣ್ಮರೆ: ‘ಸುಪ್ರೀಂ’ ಕಳವಳ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 20:27 IST
Last Updated 20 ಜುಲೈ 2017, 20:27 IST

ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ತೇವಾಂಶವಿರುವ ಪ್ರದೇಶಗಳು ಕಣ್ಮರೆಯಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಕಳವಳ ವ್ಯಕ್ತಪಡಿಸಿದೆ. ಅಪಾರ ಪ್ರಮಾಣದ ಹಣವನ್ನು ಜಲಮೂಲಗಳ ಸಂರಕ್ಷಣೆಗೆ ಖರ್ಚು ಮಾಡುತ್ತಿರುವ ಬಗ್ಗೆ ವಿವರಣೆ ನೀಡುವಂತೆ ಇದೇ ವೇಳೆ ಕೇಳಿದೆ.

ಬೆಂಗಳೂರಿನಲ್ಲಿ ಕೆರೆಗಳು ಮಾಯವಾಗುತ್ತಿರುವ ಕುರಿತ ವರದಿಯನ್ನು  ಸುಪ್ರೀಂ ಕೋರ್ಟ್‌ ಪ್ರಸ್ತಾಪಿಸಿದೆ.

‘ತೇವಾಂಶದ ಭೂಮಿ ಕಡಿಮೆಯಾಗಿರುವುದರಿಂದ 2015ರಲ್ಲಿ ಚೆನ್ನೈಯಲ್ಲಿ ಪ್ರವಾಹ ಬಂದಿತ್ತು. ಭೋಪಾಲ್‌ ಮತ್ತು ಬೆಂಗಳೂರಿನಲ್ಲಿ ಕೆರೆಗಳು ಕಡಿಮೆಯಾಗುತ್ತಿವೆ’ ಎಂದು ನ್ಯಾಯಮೂರ್ತಿ ಮದನ್‌ ಬಿ. ಲೋಕೂರ್‌ ಮತ್ತು ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.