ADVERTISEMENT

ತ್ರಿಪಕ್ಷೀಯ ಮಾತುಕತೆ: ಭಾರತ, ಚೀನಾ ಬೆಂಬಲ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2014, 14:11 IST
Last Updated 13 ಡಿಸೆಂಬರ್ 2014, 14:11 IST

ನವದೆಹಲಿ (ಪಿಟಿಐ): ಪ್ರಮುಖ ಜಾಗತಿಕ ಸವಾಲುಗಳು ಹಾಗೂ ಪರಸ್ಪರ ನಡುವಣ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಅಮೆರಿಕ ಜತೆಗಿನ ತ್ರಿಪಕ್ಷೀಯ ಮಾತುಕತೆಯಲ್ಲಿ  ಪಾಲ್ಗೊಳ್ಳಲು  ಭಾರತ ಹಾಗೂ ಚೀನಾ  ಸಮ್ಮತಿಸಿವೆ.

‘ಭಾರತ, ಅಮೆರಿಕ ಹಾಗೂ ಚೀನಾ ನಡುವಣ ತ್ರಿಪಕ್ಷೀಯ ಮಾತುಕತೆ ಪ್ರಸ್ತಾವವನ್ನು ನಾನು ಒಪ್ಪುತ್ತೇನೆ. ಇದೊಂದು ಉತ್ತಮ ಆಲೋಚನೆಯಾಗಿದ್ದು,  ಅಭಿವೃದ್ಧಿ ಹಾಗೂ ಶಾಂತಿ ಸ್ಥಾಪನೆಯಾಗುವುದಾದರೆ ಚೀನಾ ಯಾವುದೇ ಮಾತುಕತೆಗೆ ಮುಕ್ತವಾಗಿದೆ’ ಎಂದು ನವದೆಹಲಿಯಲ್ಲಿರುವ ಚೀನಾದ ರಾಯಭಾರಿ ಲೀ ಯುಚೆಂಗ್ ಅವರು ತಿಳಿಸಿದ್ದಾರೆ.

‘ಪ್ರಜಾವಾಣಿ’ ಸೋದರ ಪತ್ರಿಕೆ ಡೆಕ್ಕನ್‌ ಹೆರಾಲ್ಡ್‌ ಆಯೋಜಿಸಿದ್ದ ‘21ನೇ ಶತಮಾನದ ರಚನೆ: ಭಾರತ, ಅಮೆರಿಕ ಹಾಗೂ ಚೀನಾ’ ಸಮಾರಂಭದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಯುಚೆಂಗ್ ಅವರು ಉತ್ತರಿಸಿದರು.

ADVERTISEMENT

ಈ ಪ್ರಸ್ತಾವವನ್ನು ಬೆಂಬಲಿಸಿದ ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಕೆ.ಸಿಂಗ್, ಪರಸ್ಪರ ದ್ವಿಪಕ್ಷೀಯ ಬಾಂಧವ್ಯ ಹೊಂದಿರುವ ಮೂರು ರಾಷ್ಟ್ರಗಳ ನಡುವೆ ಇದು ಮತ್ತಷ್ಟು ಸಹಕಾರ ವೃದ್ಧಿಸಲಿದೆ ಎಂದು ಅಭಿಪ್ರಾಯ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.