ಅಗರ್ತಲ (ಐಎಎನ್ಎಸ್): ಚುನಾವಣಾ ಆಯೋಗ ತ್ರಿಪುರಾದಲ್ಲಿ 9 ಮಹಿಳಾ ಮತದಾನ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
‘ಈ ಹಿಂದಿನ ಮತಗಟ್ಟೆಗಳಲ್ಲಿ ಮಹಿಳೆಯರ ನಿರ್ವಹಣೆಯನ್ನು ಗಮನದಲ್ಲಿರಿಸಿಕೊಂಡು, ಮಹಿಳಾ ಸಿಬ್ಬಂದಿಮಾತ್ರ ಕಾರ್ಯ ನಿರ್ವಹಿಸುವ 9 ಮತಗಟ್ಟೆಗಳನ್ನು ಆಯೋಗ ಸ್ಥಾಪಿಸಲಿದೆ’ ಎಂದು ತ್ರಿಪುರಾದ ಮುಖ್ಯ ಚುನಾವಣಾಧಿಕಾರಿ ಅಶುತೋಷ್ ಜಿಂದಾಲ್ ಬುಧವಾರ ತಿಳಿಸಿದ್ದಾರೆ.
‘60 ಮಹಿಳೆಯರು ಸೇರಿ ಸುಮಾರು 19,000 ಚುನಾವಣಾ ಸಿಬ್ಬಂದಿ ತ್ರಿಪುರಾದ ವಿವಿಧ ಭಾಗದ 3,095 ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.