ADVERTISEMENT

ತ್ವರಿತ ಮತ್ತು ಪಾರದರ್ಶಕ ಆಡಳಿತ ನೀಡಲಾಗುತ್ತಿದೆ: ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 22 ಮೇ 2015, 9:50 IST
Last Updated 22 ಮೇ 2015, 9:50 IST

ನವದೆಹಲಿ (ಪಿಟಿಐ): ಕಳೆದೊಂದು ವರ್ಷದಲ್ಲಿ ದೇಶದ ಜನರಿಗೆ ತ್ವರಿತ ಮತ್ತು ಪಾರದರ್ಶಕ ಆಡಳಿತ ನೀಡಲಾಗಿದೆ ಎಂದು ಕೇಂದ್ರದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಶುಕ್ರವಾರ ತಿಳಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿ  ಅವರು ಮಾತನಾಡುತ್ತಿದ್ದರು.

ಉತ್ತಮ ಮತ್ತು ಪಾರದರ್ಶಕ ಆಡಳಿತ, ಸವಲತ್ತುಗಳು ಜನರ ಬಳಿಗೆ ತ್ವರಿತವಾಗಿ ತಲುಪಲು ಕೈಗೊಂಡ ನೂತನ ಕ್ರಮಗಳು ಸೇರಿದಂತೆ ಭ್ರಷ್ಟಚಾರರಹಿತ ಆಡಳಿತವನ್ನು ಮೋದಿ ಸರ್ಕಾರ ನೀಡಿದೆ ಎಂದು ಜೇಟ್ಲಿ ತಿಳಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ಯುಪಿಎ ಮಾಡಿರುವ ಸಾಧನೆಗಳನ್ನು ಬಿಜೆಪಿ ಕಳೆದ ಒಂದು ವರ್ಷದಲ್ಲಿ ಮಾಡಿ ತೋರಿಸಿದೆ. ಇದರಿಂದ ವಿಶ್ವದಲ್ಲಿ ಭಾರತಕ್ಕೆ  ಗೌರವ ಲಭಿಸಿದೆ ಎಂದರು. ರೈಲ್ವೆ, ವಿದ್ಯುತ್‌, ಗ್ರಾಮೀಣಾಭಿವೃದ್ಧಿ, ಪೆಟ್ರೋಲಿಯಂ, ಗಣಿಗಾರಿಕೆ, ಕಲ್ಲಿದ್ದಲು, ಹೆದ್ದಾರಿ, ಗ್ರಾಮೀಣ ರಸ್ತೆಗಳು, ಟೆಲಿಕಾಂ ಮತ್ತು ಆರ್ಥಿಕ ಸೇವೆಗಳಲ್ಲಿ ಭಾರತ ತ್ವರಿತವಾಗಿ ಅಭಿವೃದ್ಧಿಯತ್ತ ಮುಖ ಮಾಡುತ್ತಿದೆ ಎಂದರು.

ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಹಿರಿಯ ನಾಯಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT