ADVERTISEMENT

‘ದನದ ಮಾಂಸ ತಿಂದಿದ್ದರಿಂದ ಬೋಲ್ಟ್‌ಗೆ ಚಿನ್ನ’

ಬಿಜೆಪಿ ಸಂಸದ ಉದಿತ್‌ರಾಜ್‌ ಹೇಳಿಕೆ

ಪಿಟಿಐ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
‘ದನದ ಮಾಂಸ ತಿಂದಿದ್ದರಿಂದ ಬೋಲ್ಟ್‌ಗೆ ಚಿನ್ನ’
‘ದನದ ಮಾಂಸ ತಿಂದಿದ್ದರಿಂದ ಬೋಲ್ಟ್‌ಗೆ ಚಿನ್ನ’   

ನವದೆಹಲಿ (ಪಿಟಿಐ):  ‘ದಿನಕ್ಕೆ ಎರಡು ಬಾರಿ ದನದ ಮಾಂಸ ತಿನ್ನಲು ಜಮೈಕಾದ ಅಥ್ಲೀಟ್‌ ಉಸೇನ್‌ ಬೋಲ್ಟ್‌ಗೆ ತರಬೇತುದಾರ ಸಲಹೆ ನೀಡಿದ್ದರು ಹಾಗಾಗಿ ಅವರು ಒಲಿಂಪಿಕ್ಸ್‌ನಲ್ಲಿ ಒಂಬತ್ತು ಚಿನ್ನದ ಪದಕ ಗೆದ್ದಿದ್ದಾರೆ’ ಎಂದು ಬಿಜೆಪಿ ಸಂಸದ, ದಲಿತ ನಾಯಕ ಉದಿತ್‌ ರಾಜ್‌ ನೀಡಿರುವ ಹೇಳಿಕೆ ಕೆಲವರ ಹುಬ್ಬೇರುವಂತೆ ಮಾಡಿದೆ.

‘ಬಡತನದಲ್ಲಿ ಹುಟ್ಟಿ ಬೆಳೆದ ಜಮೈಕಾದ ಬೋಲ್ಟ್‌ ಅವರಿಗೆ  ತರಬೇತುದಾರರು ದಿನಕ್ಕೆ ಎರಡು ಬಾರಿ ದನದ ಮಾಂಸ ತಿನ್ನಲು ಹೇಳಿದ್ದರು.  ಹಾಗಾಗಿ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಅವರು 9 ಚಿನ್ನದ ಪದಕ ಗೆದ್ದಿದ್ದಾರೆ’ ಎಂದು  ವಾಯವ್ಯ ದೆಹಲಿ ಕ್ಷೇತ್ರದ ಸಂಸದ ಟ್ವೀಟ್ ಮಾಡಿದ್ದಾರೆ.

ತಮ್ಮ ಹೇಳಿಕೆಯಿಂದ ವಿವಾದ ಸೃಷ್ಟಿಯಾಗುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವ  ಉದಿತ್‌ ರಾಜ್‌ ಅವರು ‘ಬೋಲ್ಟ್‌ ತರಬೇತುದಾರ ಹೇಳಿದ್ದನ್ನೇ ನಾನು ಹೇಳಿದ್ದೇನೆ ಎಂದಿದ್ದಾರೆ.

ಕ್ರೀಡಾಪಟುಗಳು ಅನಾನುಕೂಲತೆ ಮಧ್ಯೆ ಯಶಸ್ಸಿಗೆ ದಾರಿ  ಕಂಡುಕೊಳ್ಳಬೇಕು. ವೈಫಲ್ಯಗಳಿಗೆ ವ್ಯವಸ್ಥೆಯನ್ನು ದೂರಬಾರದು ಎನ್ನುವುದು ನನ್ನ ಮಾತಿನ ಅರ್ಥ ಎಂದು ಸಂಸದರು ಹೇಳಿದ್ದಾರೆ.

ಮೂಲಸೌಕರ್ಯ ಸರಿಯಿಲ್ಲ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುವುದನ್ನು ದೂರವಿಟ್ಟು ಬೋಲ್ಟ್‌ ಅವರಿಂದ ಸಮರ್ಪಣಾ ಮನೋಭಾವ ಕಲಿಯಬೇಕು. ಯಶಸ್ಸಿಗೆ ಬೋಲ್ಟ್‌ ಕಂಡುಕೊಂಡಂತೆ ನೀವೂ ದಾರಿ ಮತ್ತು ಉಪಾಯಗಳನ್ನು ಕಂಡುಕೊಳ್ಳಿ ಎನ್ನುವುದೇ ನನ್ನ ಸಲಹೆಯಾಗಿದೆ.

ಕ್ರೀಡೆಗೆ ದೇಶದಲ್ಲಿ ಮೂಲಸೌಕರ್ಯದ ಕೊರತೆ ಇಲ್ಲ. ಕೀನ್ಯಾ, ಜಮೈಕಾ ದೇಶಗಳಿಗಿಂತಲೂ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ಕ್ರೀಡೆಗೆ ನೀಡುತ್ತಿದೆ ಎಂದು ಉದಿತ್‌ ರಾಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.