ADVERTISEMENT

ನಕಲಿ ಕಾಲ್‌ಸೆಂಟರ್‌ ಮಾಸ್ಟರ್ ಮೈಂಡ್‌ ‘ಶಾಗ್ಗಿ’ ಬಂಧನ

ಗೆಳತಿಗೆ ಐಷಾರಾಮಿ ಕಾರು ಕೊಡುಗೆ ನೀಡಿದ್ದ

ಏಜೆನ್ಸೀಸ್
Published 8 ಏಪ್ರಿಲ್ 2017, 10:25 IST
Last Updated 8 ಏಪ್ರಿಲ್ 2017, 10:25 IST
ಸಾಗರ್‌ ಠಕ್ಕರ್‌
ಸಾಗರ್‌ ಠಕ್ಕರ್‌   

ಥಾಣೆ: ‘ಇಂಟರ್‌ನ್ಯಾಷನಲ್‌ ರೆವೆನ್ಯೂ ಕಾಲ್‌ಸೆಂಟರ್‌’ ಹೆಸರಿನಲ್ಲಿ ಹಲವರಿಗೆ ವಂಚಿಸಿರುವ ನಕಲಿ ಕಾಲ್‌ಸೆಂಟರ್‌ ಜಾಲದ ಮುಖ್ಯ ಆರೋಪಿ ಸಾಗರ್‌ ಠಕ್ಕರ್‌ (24) ಅಲಿಯಾಸ್‌ ‘ಶಾಗ್ಗಿ’ಯನ್ನು ಥಾಣೆ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸಾಗರ್‌ನನ್ನು ಬಂಧಿಸಲಾಗಿದೆ ಎಂದು ಥಾಣೆ ಪೊಲೀಸರು ತಿಳಿಸಿದ್ದಾರೆ.

ಅಮೆರಿಕದ ‘ಇಂಟರ್‌ನ್ಯಾಷನಲ್‌ ರೆವೆನ್ಯೂ ಕಾಲ್‌ಸೆಂಟರ್‌’ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಅಮೆರಿಕದ ಸಾವಿರಾರು ಮಂದಿಗೆ ವಂಚಿಸುತ್ತಿದ್ದ ನಕಲಿ ಕಾಲ್‌ಸೆಂಟರ್‌ಗಳ ಜಾಲದ ಕೃತ್ಯವು ಕಳೆದ ವರ್ಷ ಬೆಳಕಿಗೆ ಬಂದಿತ್ತು.

ADVERTISEMENT

ಈ ನಕಲಿ ಕಾಲ್‌ ಸೆಂಟರ್‌ ಜಾಲವು ಸಾವಿರಾರು ಮಂದಿ ಅಮೆರಿಕನ್ನರಿಂದ ಸುಮಾರು ₹ 2 ಸಾವಿರ ಕೋಟಿ ಆನ್‌ಲೈನ್‌ ಕಳವು ಮಾಡಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಸುಮಾರು 70 ಮಂದಿಯನ್ನು ಬಂಧಿಸಿದ್ದರು. ಈ ಕಾಲ್‌ಸೆಂಟರ್‌ಗಳ ಸುಮಾರು 700 ಮಂದಿ ಉದ್ಯೋಗಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಈ ನಕಲಿ ಜಾಲದ ಕೃತ್ಯ ಬೆಳಕಿಗೆ ಬಂದ ಬಳಿಕ ಸಾಗರ್‌ ಭೂಗತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗೆಳತಿಗೆ ಐಷಾರಾಮಿ ಕಾರು ಕೊಡುಗೆ ನೀಡಿದ್ದ
ಸಾಗರ್‌ ತನ್ನ ಗೆಳತಿಯ ಜನ್ಮದಿನಕ್ಕೆ ₹2.5 ಕೋಟಿಯ ಐಷಾರಾಮಿ ಕಾರನ್ನು ಕೊಡುಗೆಯಾಗಿ ನೀಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.