ADVERTISEMENT

ನಜೀಂ ಜೈದಿ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST
ಕೇಂದ್ರ ಚುನಾವಣಾ ಆಯುಕ್ತರರಾಗಿ ನಜೀಂ ಜೈದಿ ಭಾನುವಾರ ಅಧಿಕಾರ ಸ್ವೀಕರಿಸಿದರು
ಕೇಂದ್ರ ಚುನಾವಣಾ ಆಯುಕ್ತರರಾಗಿ ನಜೀಂ ಜೈದಿ ಭಾನುವಾರ ಅಧಿಕಾರ ಸ್ವೀಕರಿಸಿದರು   

ನವದೆಹಲಿ (ಪಿಟಿಐ): ಹೊಸ ಮುಖ್ಯ ಚುನಾವಣಾ ಆಯುಕ್ತರಾಗಿ ನಜೀಂ ಜೈದಿ ಅವರು ಭಾನುವಾರ ಅಧಿಕಾರ ವಹಿಸಿ ಕೊಂಡರು.
ಮುಖ್ಯ ಚುನಾವಣಾ ಆಯುಕ್ತ ರಾಗಿದ್ದ ಹರಿಶಂಕರ್‌ ಬ್ರಹ್ಮ ಅವರು ಶನಿವಾರ ಸೇವೆಯಿಂದ ನಿವೃತ್ತರಾದರು.

ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತ ನಾಡಿದ ಜೈದಿ ಅವರು, ‘ಭಾರತದ ಸಂವಿಧಾನದ ಅತ್ಯುತ್ತಮ ಸಂಸ್ಥೆ ಯೊಂದರ ಜವಾಬ್ದಾರಿಯನ್ನು ವಹಿಸಿ ಕೊಳ್ಳುವುದಕ್ಕೆ ಹೆಮ್ಮೆಯಾಗುತ್ತಿದೆ. ಸ್ವತಂತ್ರ, ಪಾರದರ್ಶಕ, ವೃತ್ತಿಪರ ತತ್ತ್ವಗಳನ್ನು ಮೂಲವನ್ನಾಗಿಸಿಕೊಂಡು ಭಾರತದ ಚುನಾವಣಾ ಆಯೋಗ ಸಮರ್ಥ ಚುನಾವಣಾ ತಂತ್ರಗಳನ್ನು ರೂಪಿಸಲಿದೆ. ಮುಕ್ತ ಹಾಗೂ ನ್ಯಾಯಸಮ್ಮತ  ಚುನಾವಣೆಗೆ ಆದ್ಯತೆ ನೀಡ ಲಾಗುವುದು’ಎಂದುತಿಳಿಸಿದರು.

ಜೈದಿ ಅವರ ಅಧಿಕಾರಾವಧಿ 2017ರ ಜುಲೈ ತಿಂಗಳಿಗೆ ಮುಗಿಯಲಿದೆ.

ಅವರು 2012 ಆಗಸ್ಟ್‌ 7ರಿಂದ ಚುನಾವಣಾ  ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಚುನಾವಣಾ ಆಯೋಗದಲ್ಲಿ ಈಗ ಖಾಲಿ ಇರುವ ಇಬ್ಬರು ಆಯುಕ್ತರ ಹುದ್ದೆಗಳಿಗೆ ಸರ್ಕಾರ ಕ್ರಮ ಕೈಗೊಳ್ಳ ಬೇಕಾಗಿದ್ದು, ಕಾನೂನು ಸಚಿವಾಲಯವು ಇಬ್ಬರು ಆಯುಕ್ತರ ನೇಮಕದ ಬಗ್ಗೆ ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದೆ. ಶೀಘ್ರ ಇಬ್ಬರು ಆಯುಕ್ತರ ನೇಮಕ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.