ADVERTISEMENT

ನಟಿ ಸಾಗರಿಕ ಜತೆ ಸರಳ ವಿವಾಹವಾದ ಜಹೀರ್ ಖಾನ್‌

ಏಜೆನ್ಸೀಸ್
Published 23 ನವೆಂಬರ್ 2017, 10:34 IST
Last Updated 23 ನವೆಂಬರ್ 2017, 10:34 IST
ನಟಿ ಸಾಗರಿಕ ಜತೆ ಸರಳ ವಿವಾಹವಾದ ಜಹೀರ್ ಖಾನ್‌
ನಟಿ ಸಾಗರಿಕ ಜತೆ ಸರಳ ವಿವಾಹವಾದ ಜಹೀರ್ ಖಾನ್‌   

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಜಹೀರ್ ಖಾನ್‌ ನಟಿ ಸಾಗರಿಕಾ ಘಾಟ್ಗೆ ಅವರನ್ನು ಗುರುವಾರ ವಿವಾಹವಾದರು.

ಇಲ್ಲಿನ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಜಹೀರ್‌ ಖಾನ್‌ ಸರಳವಾಗಿ ರಿಜಿಸ್ಟರ್‌ ಮ್ಯಾರೇಜ್‌ ಆದರು. ಈ ಸಂದರ್ಭದಲ್ಲಿ ಜಹೀರ್ ಖಾನ್‌ ಮತ್ತು ಸಾಗರಿಕ ಅವರ ಕುಟುಂಬ ವರ್ಗದವರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.

ಇದೇ ನವೆಂಬರ್ 27ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ವೇಳೆ ಆಪ್ತ ಸ್ನೇಹಿತರು, ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಭಾಗವಹಿಸಲಿದ್ದಾರೆ.

ADVERTISEMENT

ಸ್ಪೋರ್ಟ್ಸ್‌ ಫಿಟ್ನೆಸ್‌ ಸ್ಟುಡಿಯೋದ ಬುಸಿನೆಸ್‌ ಮುಖ್ಯಸ್ಥೆ ಅಂಜನಾ ಶರ್ಮಾ ಜಹೀರ್‌ ಖಾನ್‌ ಅವರ ವಿವಾಹದ ಪೋಟೊವನ್ನು ಶೇರ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.