ADVERTISEMENT

ನಟ ರವಿತೇಜ ತಮ್ಮ ಅಪಘಾತದಲ್ಲಿ ಸಾವು

ಪಿಟಿಐ
Published 25 ಜೂನ್ 2017, 18:50 IST
Last Updated 25 ಜೂನ್ 2017, 18:50 IST
ನಟ ರವಿತೇಜ ತಮ್ಮ ಅಪಘಾತದಲ್ಲಿ ಸಾವು
ನಟ ರವಿತೇಜ ತಮ್ಮ ಅಪಘಾತದಲ್ಲಿ ಸಾವು   

ಹೈದರಾಬಾದ್‌: ತೆಲುಗು ಸಿನಿಮಾ ನಟ ರವಿತೇಜ ಅವರ ತಮ್ಮ ಭರತ್‌ (45) ಅವರು ಕಾರು ಅಪಘಾತದಲ್ಲಿ ಶನಿವಾರ ತಡರಾತ್ರಿ ಇಲ್ಲಿ ಮೃತಪಟ್ಟಿದ್ದಾರೆ.

ಭರತ್‌ ಅವರು ಚಲಾಯಿಸುತ್ತಿದ್ದ ಕಾರು ಶಂಶಾಬಾದ್‌ನ ಕೊತ್ವಾಲಗುಡ ಎಂಬಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ಕಾರಿನಲ್ಲಿ ಭರತ್‌ ಅವರೊಬ್ಬರೇ ಇದ್ದರು. ಕಾರು ತಾಸಿಗೆ 140 ಕಿ.ಮೀ ಗೂ ಹೆಚ್ಚು ವೇಗದಲ್ಲಿ ಹೋಗುತ್ತಿತ್ತು ಎನ್ನಲಾಗಿದೆ.

ಭರತ್‌ ಅವರು ಮಾದಕ ಪದಾರ್ಥ ಸೇವನೆಯ ಚಟ ಹೊಂದಿದ್ದರು ಮತ್ತು ಒರಟಾಗಿ ವರ್ತಿಸುತ್ತಿದ್ದರು. ಹೀಗಾಗಿ ರವಿತೇಜ ಅವರು ತಮ್ಮನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿಲ್ಲ. ಕೊಕೇನ್‌ ಇರಿಸಿಕೊಂಡಿದ್ದರು ಎಂಬ ಕಾರಣಕ್ಕೆ ಹಲವು ಬಾರಿ ಪೊಲೀಸರು ಭರತ್‌ ಅವರನ್ನು ಬಂಧಿಸಿದ್ದರು.

ADVERTISEMENT

ಅಪಘಾತ ನಡೆದಾಗ ಅವರು ಮದ್ಯ ಸೇವಿಸಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಹ ಪಡೆಯುವುದಕ್ಕಾಗಿ ಭರತ್‌ ಅವರ ಕುಟುಂಬದ ಸದಸ್ಯರು ಮುಂದೆ ಬಂದಿಲ್ಲ. ಹಾಗಾಗಿ ಅವರ ಗೆಳೆಯರೇ ಸೇರಿ ಅಂತ್ಯಕ್ರಿಯೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.