ADVERTISEMENT

ನಿಗದಿಯಂತೆ ಫೆ.1ಕ್ಕೆ ಕೇಂದ್ರ ಬಜೆಟ್‌ ಮಂಡನೆ

‌ಮುಂದೂಡಿಕೆ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಏಜೆನ್ಸೀಸ್
Published 23 ಜನವರಿ 2017, 11:09 IST
Last Updated 23 ಜನವರಿ 2017, 11:09 IST
ನಿಗದಿಯಂತೆ ಫೆ.1ಕ್ಕೆ ಕೇಂದ್ರ ಬಜೆಟ್‌ ಮಂಡನೆ
ನಿಗದಿಯಂತೆ ಫೆ.1ಕ್ಕೆ ಕೇಂದ್ರ ಬಜೆಟ್‌ ಮಂಡನೆ   

ನವದೆಹಲಿ: ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಫೆಬ್ರುವರಿ 1ರಂದು ನಿಗದಿಯಾಗಿರುವ ಕೇಂದ್ರ ಬಜೆಟ್‌ ಮಂಡನೆಯನ್ನು ಮುಂದೂಡುವಂತೆ ಸಲ್ಲಿಕೆಯಾಗಿದ್ದ ಪಿಐಎಲ್‌ ವಜಾ ಮಾಡಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಪಂಜಾಬ್‌ ಹಾಗೂ ಗೋವಾ ರಾಜ್ಯಗಳಲ್ಲಿ ಫೆ.4ರಿಂದ ಮಾರ್ಚ್‌ 8ರ ವರೆಗೂ ಚುನಾವಣೆ ನಿಗದಿಯಾಗಿದ್ದು, ಫೆಬ್ರುವರಿ 1ರಂದು ಮಂಡನೆಯಾಗುವ 2017ನೇ ಸಾಲಿನ ಕೇಂದ್ರ ಬಜೆಟ್‌ ಮತದಾರರ ಮೇಲೆ ಪ್ರಭಾವ ಬೀರಬಹುದಾಗಿದೆ ಎಂದು ಪಿಐಎಲ್‌ ಸಲ್ಲಿಸಲಾಗಿತ್ತು.

ಮತದಾರರ ಮೇಲೆ ಬಜೆಟ್‌ ಬೀರಬಹುದಾದ ಪ್ರಭಾವದ ಬಗ್ಗೆ ಸೂಕ್ತ ವಿವರಣೆ ದೊರೆಯದ ಕಾರಣದಿಂದ ಎಂ.ಎಲ್‌.ಶರ್ಮಾ ಸಲ್ಲಿಸಿದ್ದ ಪಿಐಎಲ್‌ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ADVERTISEMENT

ಫೆ.1ರ ಬದಲು ಏಪ್ರಿಲ್‌ 1ರಂದು ಬಜೆಟ್‌ ಮಂಡಿಸಲು ಸೂಚಿಸುವಂತೆ ಕೋರಲಾಗಿತ್ತು. ಇದೀಗ ನಿಗದಿಯಂತೆ ಫೆ.1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.