ADVERTISEMENT

ನೇಪಾಳ ಅಧ್ಯಕ್ಷೆ ಇಂದು ಭಾರತಕ್ಕೆ

ಪಿಟಿಐ
Published 16 ಏಪ್ರಿಲ್ 2017, 19:30 IST
Last Updated 16 ಏಪ್ರಿಲ್ 2017, 19:30 IST
ನೇಪಾಳ ಅಧ್ಯಕ್ಷೆ ಇಂದು ಭಾರತಕ್ಕೆ
ನೇಪಾಳ ಅಧ್ಯಕ್ಷೆ ಇಂದು ಭಾರತಕ್ಕೆ   

ನವದೆಹಲಿ:  ನೇಪಾಳದ ಮೊದಲ ಮಹಿಳಾ ಅಧ್ಯಕ್ಷರಾಗಿರುವ ವಿದ್ಯಾ ದೇವಿ ಭಂಡಾರಿ ಅವರು ಸೋಮವಾರ ಭಾರತಕ್ಕೆ ಬರಲಿದ್ದು ಅದ್ದೂರಿ ಸ್ವಾಗತಕ್ಕೆ ವೇದಿಕೆ ಸಿದ್ಧಗೊಂಡಿದೆ.

ಆರು ತಿಂಗಳಲ್ಲಿ ಭಾರತ–ನೇಪಾಳ ಉನ್ನತಮಟ್ಟದ ನಾಯಕರ ಮಧ್ಯೆ ನಡೆಯುತ್ತಿರುವ ನಾಲ್ಕನೇ ಭೇಟಿ ಇದಾಗಿದೆ.

ನವೆಂಬರ್ 2016ರಿಂದ ನೇಪಾಳದೊಂದಿಗೆ ನಾವು 30 ಬಾರಿ ಮಾತುಕತೆ ನಡೆಸಿದ್ದೇವೆ’ ಎಂದು  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಧಾಕರ್‌ ದಲೇಲ್‌ ಹೇಳಿದ್ದಾರೆ.

ADVERTISEMENT

ಸೇನಾ ವಿಷಯಕ್ಕೆ ಸಂಬಂಧಿಸಿದಂತೆ ನೇಪಾಳವು ಚೀನಾದೊಂದಿಗೆ ಮೊದಲ ಬಾರಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲೇ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ನೇಪಾಳ–ಚೀನಾ ಜಂಟಿ ಸಮರಾಭ್ಯಾಸ (ಕಠ್ಮಂಡು ವರದಿ): ಭಯೋತ್ಪಾದನೆ ಒಡ್ಡಿರುವ ಸವಾಲು ಎದುರಿಸುವ ಸಲುವಾಗಿ ನೇಪಾಳ ಮತ್ತು ಚೀನಾ ಮೊದಲ ಬಾರಿಗೆ ಜಂಟಿ ಸಮರಾಭ್ಯಾಸ ಆರಂಭಿಸಿವೆ.  ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ವೃದ್ಧಿಗೊಳಿಸುವುದು ಇದರ ಹಿಂದಿನ ಉದ್ದೇಶ ಎಂದು ನೇಪಾಳ ಸೇನೆ ಹೇಳಿದೆ.

ಆದರೆ ಎರಡು ರಾಷ್ಟ್ರಗಳ ಈ ನಡೆ ಭಾರತದ ಆತಂಕಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.