ADVERTISEMENT

ನೈಸರ್ಗಿಕ ವಿಪತ್ತು: ಟ್ರಸ್ಟ್‌‌ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ನವದೆಹಲಿ (ಐಎಎನ್‌ಎಸ್‌): ಬರ ಸಂದರ್ಭಗಳಲ್ಲಿ ಜನರಿಗೆ ಪರಿಹಾರ ಒದಗಿಸಲು ಜೈಪುರ ರಾಜರು 1900ರಲ್ಲಿ ಪ್ರಾರಂಭಿಸಿದ್ದ ನೈಸರ್ಗಿಕ ವಿಪತ್ತುಗಳ ಭಾರತೀಯ ಜನರ ಟ್ರಸ್ಟ್‌ ಅನ್ನು (ಐಪಿಎನ್‌ಸಿಟಿ) ಸರ್ಕಾರ ಸ್ಥಗಿತಗೊಳಿಸಿದೆ.

ಜೈಪುರದ ಮಹಾರಾಜರು1900ರಲ್ಲಿ ಸ್ಥಾಪಿಸಿದ್ದ ಟ್ರಸ್ಟ್‌ 1995ರಲ್ಲಿ ಸಭೆ ನಡೆಸಿದ್ದು  ಹಾಗೂ ವಿಕೋಪಗಳು ಸಂಭವಿಸಿದಾಗ  ಪ್ರಧಾನಮಂತ್ರಿಗಳ ಪರಿ ಹಾರ ನಿಧಿಗೆ ದೇಣಿಗೆ ಕೊಡುವುದನ್ನು ಬಿಟ್ಟರೆ ಸಂಪೂರ್ಣವಾಗಿ ನಿಷ್ಕ್ರಿಯವಾ ಗಿತ್ತು. ಹಾಗಾಗಿ  ಜೈಪುರ ರಾಜವಂಶಸ್ಥರ ಜತೆ ಚರ್ಚಿಸಿಯೇ ಟ್ರಸ್ಟ್‌ ಮುಚ್ಚಲು ನಿರ್ಧರಿಸಲಾಯಿತು ಎಂದು ಕೃಷಿ ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.