ADVERTISEMENT

ಪತ್ನಿ ಹಣಕಾಸು ಮಾಹಿತಿ ಪತಿಗೂ ನೀಡುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಪತ್ನಿಯ ಹಣಕಾಸಿನ ವಿವರವನ್ನು ಸ್ವತಃ ಪತಿಯೆ ಮಾಹಿತಿ ಹಕ್ಕು ಕಾಯಿದೆಯಡಿ ಕೇಳಿದ್ದರೂ ನೀಡುವಂತಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ ಹೇಳಿದೆ. ಹಣಕಾಸಿನ ಮಾಹಿತಿ ವೈಯಕ್ತಿಕವಾ­ದುದು ಎಂದು ಆಯೋಗ ಹೇಳಿದೆ.

ಒಂದು ವೇಳೆ ಪತಿ ಪತ್ನಿಯರು ವಿವಾಹ ಸಂಬಂಧ ವ್ಯಾಜ್ಯ ಅಥವಾ ದೌರ್ಜನ್ಯ ಆರೋಪಗಳಲ್ಲಿ ಸಿಕ್ಕಿಹಾಕಿ­ಕೊಂಡಿದ್ದರೆ ಇಬ್ಬರ ಖಾಸಗಿತನ ಕಾಪಾಡುವುದು ಅಗತ್ಯ ಎಂದು ಮಾಹಿತಿ ಆಯೋಗದ ಆಯುಕ್ತ ಶ್ರೀಧರ ಆಚಾರ್ಯುಲು ಹೇಳಿದ್ದಾರೆ. ಸಂಗಾತಿಯ ವೇತನದ ಕಡಿತ ಮತ್ತು ವೆಚ್ಚದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪತಿ ಅಥವಾ ಪತ್ನಿಯರಿಗೆ ಹಕ್ಕಿಲ್ಲ. ಸಾರ್ವಜನಿಕ ಹಿತಾಸಕ್ತಿ ಇರುವ ವಿಷಯ ಹೊರತು ಪಡಿಸಿ ಇನ್ನುಳಿದ ಸಂದರ್ಭದಲ್ಲಿ ಈ ಮಾಹಿತಿ ವೈಯಕ್ತಿಕ ಎಂದು ಆಯೋಗ ಹೇಳಿದೆ.

ಸಾರ್ವಜನಿಕ ಸೇವೆಯಲ್ಲಿರುವ ಪತ್ನಿಯ ವೇತನದ ಮಾಹಿತಿ ಪಡೆಯಲು ಪತಿಗೆ ಹಕ್ಕಿದೆ. ಅದರೆ ವೆಚ್ಚ ಮತ್ತು ಸಾಲದ ಮೇಲಿನ ಕಡಿತದ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯಿದೆಯಡಿ ಪಡೆಯುವಂತಿಲ್ಲ ಎಂದು ವಿವಾಹ ವ್ಯಾಜ್ಯ ಸಂಬಂಧ ಧೀರಜ್‌ ಕಪೂರ್ ಎಂಬುವವರು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಆಯೋಗ ಈ ಮಾಹಿತಿ ನೀಡಿದೆ. ಈವರೆಗಿನ ಮಾಹಿತಿ ಹಕ್ಕು ಕಾಯಿ ದೆಯ ಪ್ರಕಾರ ಪತಿ–ಪತ್ನಿ ಮತ್ತು ನಾಗ­ರಿಕ ಎಂಬ ವ್ಯತ್ಯಾಸವಿಲ್ಲ. ಖಾಸಗಿತನ ವೈಯಕ್ತಿಕ ಹಕ್ಕು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.