ADVERTISEMENT

ಪಳನಿಸ್ವಾಮಿ ಬಣಕ್ಕೆ ಎಐಎಡಿಎಂಕೆ ಚಿಹ್ನೆ

ಪಿಟಿಐ
Published 23 ನವೆಂಬರ್ 2017, 20:08 IST
Last Updated 23 ನವೆಂಬರ್ 2017, 20:08 IST
ಪಳನಿಸ್ವಾಮಿ ಬಣಕ್ಕೆ ಎಐಎಡಿಎಂಕೆ ಚಿಹ್ನೆ
ಪಳನಿಸ್ವಾಮಿ ಬಣಕ್ಕೆ ಎಐಎಡಿಎಂಕೆ ಚಿಹ್ನೆ   

ಚೆನ್ನೈ/ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ನೇತೃತ್ವದ ಎಐಎಡಿಎಂಕೆ ಬಣಕ್ಕೆ  ‘ಎರಡು ಎಲೆಗಳ’ ಚಿಹ್ನೆಯನ್ನು ಚುನಾವಣಾ ಆಯೋಗ ನೀಡಿದೆ. ಇದರಿಂದ ಶಶಿಕಲಾ ಬಣ ಮತ್ತು ಟಿ.ಟಿ.ವಿ. ದಿನಕರನ್‌ ಬಣಕ್ಕೆ ಹಿನ್ನಡೆಯಾಗಿದೆ.

‘ಎಐಡಿಎಂಕೆಯ ಶಾಸಕರು ಮತ್ತು ಸದಸ್ಯರು ಪಳನಿಸ್ವಾಮಿ ಹಾಗೂ ಪನ್ನೀರ್‌ಸೆಲ್ವಂ ಬಣಕ್ಕೆ ಹೆಚ್ಚು ಬಹುಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಎರಡು ಎಲೆಗಳ ಚಿಹ್ನೆಯನ್ನು ಈ ಬಣಕ್ಕೆ ನೀಡಲಾಗಿದೆ’ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಳನಿಸ್ವಾಮಿ ಅವರು, ’ಆಯೋಗದ ನಿರ್ಧಾರ ಸ್ವಾಗತಾರ್ಹ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಅತಿ ಹೆಚ್ಚು ಸಂತೋಷದಾಯಕ ಕ್ಷಣವಿದು’ ಎಂದು ಸಂಸತ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಪಟ್ಟರು.

ADVERTISEMENT

ಆರ್‌.ಕೆ. ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಘೋಷಿಸಿದ ಬಳಿಕ ಶಶಿಕಲಾ ಮತ್ತು ಪನ್ನೀರ್‌ಸೆಲ್ವಂ ಬಣಗಳು ಎರಡು ಎಲೆ ಚಿಹ್ನೆಗಾಗಿ ಹಕ್ಕು ಪ್ರತಿಪಾದಿಸಿದ್ದವು. ಆಗ ಪಳನಿಸ್ವಾಮಿ ಅವರು ಶಶಿಕಲಾ ಬಣದಲ್ಲಿದ್ದರು. ಮಾರ್ಚ್‌ನಲ್ಲಿ ಮಧ್ಯಂತರ ಆದೇಶ ನೀಡಿದ್ದ ಆಯೋಗ ಎರಡು ಎಲೆ ಚಿಹ್ನೆಯನ್ನು ಬಳಸದಂತೆ ಉಭಯ ಬಣಗಳಿಗೆ ಸೂಚಿಸಿತ್ತು. ಬಳಿಕ ಪಳನಿಸ್ವಾಮಿ ನೇತೃತ್ವದಲ್ಲಿ ಹಲವು ಶಾಸಕರು ಶಶಿಕಲಾ ವಿರುದ್ಧ ಬಂಡಾಯವೆದ್ದು ಎರಡು ಬಣಗಳನ್ನು ಒಗ್ಗೂಡಿಸಿದ್ದರು. ಈ ಬಗ್ಗೆ ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.