ADVERTISEMENT

ಪಾಠ ಬೋಧಿಸಿದ ಪ್ರಣವ್ ಮುಖರ್ಜಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 9:19 IST
Last Updated 4 ಸೆಪ್ಟೆಂಬರ್ 2015, 9:19 IST

ನವದೆಹಲಿ(ಐಎಎನ್ ಎಸ್): ಶಿಕ್ಷಕರ ದಿನಾಚರಣೆ ಮುನ್ನಾದಿನ ಶುಕ್ರವಾರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಬೋಧಿಸುವ ಮೂಲಕ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ದಿನದಮಟ್ಟಿಗೆ ಶಿಕ್ಷಕರಾಗಿದ್ದರು.

ತಮ್ಮ ರಾಜಕೀಯ ಜೀವನ ಆರಂಭಕ್ಕೂ ಮುನ್ನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹಾಗೂ ಪರ್ತಕರ್ತರೂ ಆಗಿದ್ದ ಪ್ರಣವ್ ಮುಖರ್ಜಿ ಅವರು, ಶುಕ್ರವಾರದಮಟ್ಟಿಗೆ ದೆಹಲಿಯ ಡಾ.ರಾಜೇಂದ್ರ ಪ್ರಸಾದ್ ಸರ್ವೋದಯ ವಿದ್ಯಾಲಯದ ಪಿಯು ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರ ಪಾಠ ಬೋಧಿಸಿ ಮತ್ತೊಮ್ಮೆ ಶಿಕ್ಷಕರಾದರು. 

‘ನಾನು ಉತ್ತಮ ವಿದ್ಯಾರ್ಥಿಯಾಗಿರಲಿಲ್ಲ. ನಿತ್ಯ ಶಾಲೆಗೆ ನಾಲ್ಕು ಕಿ.ಮೀ. ದೂರ ನಡೆದು ಹೋಗಬೇಕಿತ್ತು. ತುಂಬ ತುಂಟಾಟ ಮಾಡುತ್ತಿದ್ದೆ. ನನ್ನ ತುಂಟಾಟಗಳನ್ನು ನಿಯಂತ್ರಿಸಲು ತಾಯಿ ಹರಸಾಹಸ ಮಾಡುತ್ತಿದ್ದಳು. ನನಗೆ ಬೇರೆ ಆಯ್ಕೆ ಇಲ್ಲದೇ ಇದ್ದುದರಿಂದ, ಹೆಚ್ಚು ಪರಿಶ್ರಮ ವಹಿಸಿ ಓದುವಂತೆ ತಾಯಿ ತಾಕೀತು ಮಾಡುತ್ತಿದ್ದರು’ ಎಂದು ಮುಖರ್ಜಿ ಅವರು ತಮ್ಮ ವಿದ್ಯಾರ್ಥಿ ಜೀವನ ಹಾಗೂ ಶಿಕ್ಷಣಕ್ಕೆ ತಾಯಿ ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು.

ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕುಹಾಕಿದ ಬಳಿಕ ರಾಜಕೀಯ ವಿಚಾರ ಕುರಿತು ಬೋಧಿಸಿದ ಅವರು, ಸಂವಿಧಾನದ ಇತಿಹಾಸದತ್ತ ಇಣುಕಿ, ಸಂವಿಧಾನ ರಚನೆಗೆ ರಾಷ್ಟ್ರದ 300 ಜನರ ದೀರ್ಘ ಪರಿಶ್ರಮವಿದೆ. ರಾಷ್ಟ್ರ ಸ್ವಾತಂತ್ರ್ಯ ಗಳಿಸಿದ ಮೂರು ವರ್ಷದ ಬಳಿಕ ಸಂವಿಧಾನ ಜಾರಿಗೆ ಬಂತು ಎಂಬಿತ್ಯಾದಿ ವಿಷಯ ಕುರಿತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.