ADVERTISEMENT

ಪಿತೃಪಕ್ಷದ ಬಳಿಕ ಬಂಗಲೆ ತೆರವು: ಸಿಂಗ್‌್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:30 IST
Last Updated 14 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ತಮ್ಮ ಅಧಿಕೃತ ನಿವಾಸಕ್ಕೆ ವಿದ್ಯುತ್‌ ಹಾಗೂ ನೀರು ಸರಬರಾಜು ನಿಲ್ಲಿಸಿದ ಮಾರನೆಯ ದಿನವೇ  ಮಾಜಿ ಸಚಿವ ಅಜಿತ್‌ ಸಿಂಗ್‌ ಅವರು ಇದೇ ತಿಂಗಳ ೨೫ರೊಳಗೆ ಸರ್ಕಾರಿ ಬಂಗಲೆ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.

‘ನಾನು ೩೬ ವರ್ಷಗಳಿಂದ ಇಲ್ಲಿ ನೆಲೆಸಿದ್ದೇನೆ. ನನ್ನ  ತಂದೆ ( ದಿ.ಚೌಧರಿ ಚರಣ್‌ ಸಿಂಗ್‌) ೧೯೭೮ರಲ್ಲಿ ಇಲ್ಲಿಗೆ ಬಂದಿದ್ದರು. ಈ ಬಂಗಲೆ ತೆರವುಗೊಳಿ­ಸುವ ಮುನ್ನ ಅನೇಕ ಸಂಗತಿಗಳನ್ನು ನಾನು ಇತ್ಯರ್ಥಪಡಿಸಿಕೊಳ್ಳಬೇಕಿದೆ. ಬಂಗಲೆ ತೆರವು ಮಾಡುವಂತೆ ಆಗಸ್ಟ್‌ ೧೧ಕ್ಕೆ ನನಗೆ ನೋಟಿಸ್‌ ಬಂದಿತ್ತು. ಇದೇ ೨೪, ೨೫ ರಂದು ನಾನು ಇಲ್ಲಿಂದ ನಿರ್ಗಮಿಸುವೆ.  ಈಗ ಪಿತೃಪಕ್ಷ. ಅದು ಮುಗಿದ ಮೇಲೆ ನಾನು ಇಲ್ಲಿಂದ ತೆರಳುವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.