ADVERTISEMENT

‘ಪೀಪಲ್ ಚಾಯ್ಸ್‌’ ಪ್ರಶಸ್ತಿಗೆ ಪ್ರಿಯಾಂಕಾ ನಾಮನಿರ್ದೇಶನ

ಪಿಟಿಐ
Published 18 ನವೆಂಬರ್ 2016, 19:55 IST
Last Updated 18 ನವೆಂಬರ್ 2016, 19:55 IST
‘ಪೀಪಲ್ ಚಾಯ್ಸ್‌’ ಪ್ರಶಸ್ತಿಗೆ ಪ್ರಿಯಾಂಕಾ ನಾಮನಿರ್ದೇಶನ
‘ಪೀಪಲ್ ಚಾಯ್ಸ್‌’ ಪ್ರಶಸ್ತಿಗೆ ಪ್ರಿಯಾಂಕಾ ನಾಮನಿರ್ದೇಶನ   

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅವರು ಅಮೆರಿಕದ ಪೀಪಲ್ಸ್‌ ಚಾಯ್ಸ್ 2017 ಪ್ರಶಸ್ತಿಗೆ ಎರಡನೇ ಬಾರಿ ನಾಮನಿರ್ದೇಶನಗೊಂಡಿದ್ದಾರೆ.

ಅಮೆರಿಕದ ಪ್ರಖ್ಯಾತ ಟಿವಿ ಧಾರಾವಾಹಿ ‘ಕ್ವಾಂಟಿಕೋ’ದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಪ್ರಿಯಾಂಕಾ, ಜನಮೆಚ್ಚಿದ ಉತ್ತಮ ಟಿವಿ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

‘ಕ್ವಾಂಟಿಕೋ’ದಲ್ಲಿನ ಉತ್ತಮ ನಟನೆಗಾಗಿ ಕಳೆದ ವರ್ಷವೇ ಪ್ರಿಯಾಂಕಾ ಜನಮೆಚ್ಚಿದ ಟಿವಿ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು ಹಾಗೂ ಈ ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಏಷ್ಯಾ ನಟಿ ಎಂಬ ಹಿರಿಮೆಗೂ  ಪಾತ್ರರಾಗಿದ್ದರು.

ಇದೇ ವಿಭಾಗದಲ್ಲಿ ಪ್ರಿಯಾಂಕಾರೊಂದಿಗೆ ನಟಿಯರಾದ ಎಲೆನ್ ಪೊಂಪಿಯೋ, ಕೆರ್ರಿ ವಾಷಿಂಗ್ಟನ್, ತರಾಜಿ ಹೆನ್ಸನ್, ವಿಯೋಲಾ ಡೇವಿಸ್ ಅವರು ನಾಮನೀರ್ದೇಶನಗೊಂಡಿದ್ದಾರೆ.

ಜನರ ಆಯ್ಕೆಯನ್ನು ಮಾನದಂಡವಾಗಿರಿಸಿಕೊಂಡು ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ವಿತರಣಾ ಸಮಾರಂಭವು 2017ರ ಜನವರಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.