ADVERTISEMENT

ಪುತ್ರಿ ಸಿನಿಮಾದಲ್ಲಿ ನಟಿಸಲ್ಲ: ಸಚಿನ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 10:41 IST
Last Updated 27 ಏಪ್ರಿಲ್ 2015, 10:41 IST
ಪುತ್ರಿ ಸಿನಿಮಾದಲ್ಲಿ ನಟಿಸಲ್ಲ: ಸಚಿನ್‌ ಸ್ಪಷ್ಟನೆ
ಪುತ್ರಿ ಸಿನಿಮಾದಲ್ಲಿ ನಟಿಸಲ್ಲ: ಸಚಿನ್‌ ಸ್ಪಷ್ಟನೆ   

ನವದೆಹಲಿ (ಐಎಎನ್ಎಸ್): ಮಗಳು ಸಾರಾ (17) ಬಾಲಿವುಡ್‌ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾಳೆ ಎಂಬ ವದಂತಿಯನ್ನು ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ನಿರಾಕರಿಸಿದ್ದಾರೆ.

‘ಸಾರಾ ಸಂಪೂರ್ಣವಾಗಿ ಶಿಕ್ಷಣದತ್ತ ಗಮನ ಕೇಂದ್ರೀಕರಿಸಿದ್ದಾಳೆ. ಅವಳು ಸಿನಿಮಾದಲ್ಲಿ ಅಭಿನಯಿಸುತ್ತಾಳೆ ಎನ್ನುವುದು ಆಧಾರ ರಹಿತ ಸುದ್ದಿ’ ಎಂದು ಅವರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಅವರ ಮುಂದಿನ ಚಿತ್ರದಲ್ಲಿ ಸಾರಾ ನಟಿಸಲಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. 

ಸಚಿನ್‌ ಅವರ  ಕ್ರಿಕೆಟ್‌ ಬದುಕು ಆಧರಿಸಿದ ಸಾಕ್ಷ್ಯಚಿತ್ರ ನಿರ್ಮಾಣಗೊಳ್ಳುತ್ತಿರುವ ಬೆನ್ನಲ್ಲೇ, ಅವರ ಮಗಳು ಚಿತ್ರದಲ್ಲಿ ನಟಿಸಲಿದ್ದಾಳೆ ಎಂಬ ವದಂತಿ ಹುಟ್ಟಿಕೊಂಡಿರುವುದು ಗಮನೀಯ. ಸಚಿನ್‌ ಕುರಿತ ಚಿತ್ರವನ್ನು ಲಂಡನ್‌ ಮೂಲದ  ಜೇಮ್ಸ್‌ ಎರ್ಸ್ಕಿನ್‌ ನಿರ್ದೇಶಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.