ADVERTISEMENT

ಪೇಸ್‌ ವಿರುದ್ಧ ರಿಯಾ ದೂರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ಮುಂಬೈ (ಪಿಟಿಐ): ಟಿನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ವಿರುದ್ಧ ಅವರ ಮಾಜಿ ಪ್ರೇಯಸಿ ಹಾಗೂ ರೂಪದರ್ಶಿ ರಿಯಾ ಪಿಳ್ಳೈ ಸ್ಥಳೀಯ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ಹಾಗೂ ಕಿರುಕುಳ ದೂರು ದಾಖಲಿಸಿದ್ದಾರೆ.

ಲಿಯಾಂಡರ್‌ ಪೇಸ್‌ ಹಾಗೂ ಅವರ ತಂದೆ ವೆೀಸ್‌ ಪೇಸ್‌ ವಿರುದ್ಧ ಇಲ್ಲಿಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಶನಿವಾರ ದೂರು ದಾಖಲಿಸಿರುವ ರಿಯಾ, ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಕೋರಿದ್ದಾರೆ.
ಜೂನ್‌ 30 ರಂದು ನ್ಯಾಯಾಲಯ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಸಹಜೀವನ (ಲಿವ್‌ಇನ್‌ ಸಂಬಂಧ) ನಡೆಸುತ್ತಿದ್ದ  ಪೇಸ್‌ ಮತ್ತು ರಿಯಾ ಸಂಬಂಧ ಮುರಿದು ಬಿದ್ದಿದ್ದು  ಈಗ ಪ್ರತ್ಯೇಕವಾಗಿದ್ದಾರೆ.  ಇವರಿಬ್ಬರಿಗೂ ಆಯಾನಾ ಎಂಬ ಎಂಟು ವರ್ಷದ ಮಗಳಿದ್ದಾಳೆ. ಮಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಇಬ್ಬರೂ ಕಾನೂನು ಹೋರಾಟಕ್ಕೆ ಮುಂದಾ­ಗಿದ್ದಾರೆ. 

‘ನಾನು ಮತ್ತು ನನ್ನ ಮಗಳು ಕಾರ್ಟರ್‌ ರಸ್ತೆಯ ಬಂಗಲೆಗೆ ಪ್ರವೇಶಿಸ­ದಂತೆ ಲಿಯಾಂಡರ್‌ ತಂದೆ  ತಡೆಯು­ತ್ತಿದ್ದಾರೆ’ ಎಂದು  ರಿಯಾ ದೂರಿನಲ್ಲಿ ಆರೋಪಿಸಿದ್ದಾರೆ.  ಮೂರನೇ ವ್ಯಕ್ತಿಗೆ ಆಸ್ತಿ ಮಾರಾಟ ಮಾಡದಂತೆ ತಡೆಯಾಜ್ಞೆ ನೀಡು­ವಂ­ತೆಯೂ ಕೋರಿದ್ದಾರೆ.

ರಿಯಾ ವಶದಲ್ಲಿರುವ ಮಗಳನ್ನು  ಶಾಶ್ವತವಾಗಿ ತನ್ನ ಸುಪರ್ದಿಗೆ ಒಪ್ಪಿಸುವಂತೆ ಕೋರಿ ಕಳೆದ ತಿಂಗಳು ಪೇಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.